»   » ಹುಟ್ಟುಹಬ್ಬದ ಸಡಗರದಲ್ಲಿ ಕ್ರೇಜಿಸ್ಟಾರ್‌

ಹುಟ್ಟುಹಬ್ಬದ ಸಡಗರದಲ್ಲಿ ಕ್ರೇಜಿಸ್ಟಾರ್‌

Posted By:
Subscribe to Filmibeat Kannada

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ಬ್ಯಾನರ್‌ನ ‘ಆದಿಶೇಷ’ ಚಿತ್ರವನ್ನು ಸದ್ಯದಲ್ಲಿಯೇ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೇ ಹೊಸ ಚಿತ್ರ‘ಬಾ’ ಬಗ್ಗೆ ಜಾಹೀರಾತು ನೀಡಿದ್ದಾರೆ. ತಮ್ಮ ಪ್ರಯತ್ನಗಳನ್ನು ಕನಸುಗಾರನ ಮತ್ತೊಂದು ಕನಸು ಎಂದು ರವಿ ಬಣ್ಣಿಸಿದ್ದಾರೆ.

ಈ ಸಂದರ್ಭದಲ್ಲಿಯೇ ‘ಹಠವಾದಿ’ ನಿರ್ಮಾಪಕ ಸಂದೇಶ್‌ ನಾಗರಾಜ್‌, ‘ಬ್ರಾಹ್ಮಣ’ ಮತ್ತು ‘ದಶಕಂಠ’ ಚಿತ್ರಗಳನ್ನು ಪ್ರಕಟಿಸಿದ್ದಾರೆ. ರವಿಚಂದ್ರನ್‌ ಯಥಾಪ್ರಕಾರ ಈ ಚಿತ್ರಗಳಲ್ಲೂ ತಮ್ಮ ಸಕಲಕಲೆ(ಕಥೆ-ಚಿತ್ರಕತೆ- ಸಂಭಾಷಣೆ-ಸಾಹಿತ್ಯ- ಸಂಗೀತ-ಸಂಕಲನ- ನಿರ್ದೇಶನ-ನಟನೆ)ಗಳ ಪರಿಣತಿಯನ್ನು ಪ್ರದರ್ಶಿಸಲಿದ್ದಾರೆ! ಅವುಗಳನ್ನು ನೋಡುವ, ರಂಜನೆ ಪಡೆಯುವ ತಾಳ್ಮೆ ಪ್ರೇಕ್ಷಕರದು.

ರವಿಚಂದ್ರನ್‌ಗಾಗಿ ಎಂ.ಜಿ.ರಾಮಮೂರ್ತಿ, ‘ರವಿಯಣ್ಣ’ಚಿತ್ರವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಮಧ್ಯೆ ಬಾಲಮುತ್ತಯ್ಯನಿರ್ಮಾಣದ ‘ನೀಲಕಂಠ’ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

ರವಿಚಂದ್ರನ್‌ರಿಂದ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಅವೆಲ್ಲವನ್ನೂ ನೀಡಲು ಅವರು ಇನ್ನಷ್ಟು ಕಾಲ ಬಾಳಲಿ... ಎಂದು ‘ದಟ್ಸ್‌ಕನ್ನಡ’ ಹುಟ್ಟುಹಬ್ಬದ ಶುಭಾಶಯ ಹಾರೈಸುತ್ತ, ಆಶಿಸುತ್ತಿದೆ.

ರೆಬಲ್‌ಸ್ಟಾರ್‌ ಜನ್ಮದಿನ : ಸೋಮವಾರ(ಮೇ.29)ವಷ್ಟೇ ಅಂಬರೀಷ್‌ ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಮ್ಮ ಮನೆಮಂದಿಯಾಂದಿಗೆ ಅವರು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada