»   » ವಿವಾದಕ್ಕೆ ಮುಂದು, ಸಲಹೆ ನೀಡಲು ಹಿಂದು- ಇವರು ಸಿನಿಮಾ ಮಂದಿ!

ವಿವಾದಕ್ಕೆ ಮುಂದು, ಸಲಹೆ ನೀಡಲು ಹಿಂದು- ಇವರು ಸಿನಿಮಾ ಮಂದಿ!

Posted By: Staff
Subscribe to Filmibeat Kannada

ಹಂಪಿ : ವಿವಾದಕ್ಕೆ ಒಳಗಾಗಿರುವ ಚಲನ ಚಿತ್ರ ಇತಿಹಾಸ ಗ್ರಂಥದಲ್ಲಿರುವ ಲೋಪ ದೋಷಗಳ ಬಗ್ಗೆ ಅಧ್ಯಯನ ಮಾಡಲು ಹಂಪಿ ಕನ್ನಡ ವಿಶ್ವ ವಿದ್ಯಾಲಯವು ತಜ್ಞರ ಸಮಿತಿ ರಚಿಸಲು ನಿರ್ಧರಿಸಿದ್ದರೂ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಲನ ಚಿತ್ರನಿರ್ದೇಶಕರ ಸಂಘಗಳು ಇದುವರೆಗೆ ತಜ್ಞರ ಹೆಸರನ್ನೇ ಸೂಚಿಸಿಲ್ಲ ಎಂದು ವಿವಿಯ ಕುಲಪತಿ ಡಾ. ಎಚ್‌. ಜೆ. ಲಕ್ಕಪ್ಪ ಗೌಡ ದೂರಿದ್ದಾರೆ.

ರಾಜ್ಯ ಚಲನಚಿತ್ರ ಮಂಡಳಿ ಹಾಗೂ ನಿರ್ದೇಶಕ ಸಂಘಗಳಿಗೆ ಪತ್ರ ಬರೆದು ತಜ್ಞರ ಹೆಸರನ್ನು ಸೂಚಿಸುವಂತೆ ವಿವಿಯು ಕೋರಿತ್ತು. ಆದರೆ ಎರಡೂ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಲಕ್ಕಪ್ಪ ಗೌಡ ಹೇಳಿದರು. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸಮಿತಿಗೆ ತಜ್ಞರ ಹೆಸರನ್ನು ಸೂಚಿಸಲು ರಾಜ್ಯ ಚಲನಚಿತ್ರ ಮಂಡಳಿ ಹಾಗೂ ನಿರ್ದೇಶಕರ ಸಂಘಗಳಿಗೆ ವಿವಿಯು ಜೂನ್‌ 3ರ ಗಡುವು ವಿಧಿಸಿದೆ. ಈ ಅವಧಿಯಾಳಗೆ ತಜ್ಞರ ಹೆಸರನ್ನು ಸೂಚಿಸದೇ ಇದ್ದರೆ ವಿವಿಯೇ ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಲಕ್ಕಪ್ಪ ಗೌಡ ತಿಳಿಸಿದರು.

ಗ್ರಂಥದ ಪ್ರಕಟಣೆ ಮತ್ತು ಮಾರಾಟದ ಜವಾಬ್ದಾರಿ ಮಾತ್ರ ವಿವಿಗೆ ಸಂಬಂಧಿಸಿದ್ದು. ಪುಸ್ತಕದಲ್ಲಿ ಪ್ರಕಟವಾಗಿರುವ ವಿಷಯಗಳಿಗೂ ವಿವಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದರು.(ಇನ್ಫೋ ವಾರ್ತೆ)

English summary
Hampi university asks KFCC to recommend film experts names to study the kannada film history books

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada