»   » ಅದೊಂದು ಕ್ರೆೃಮ್‌‘ನ್ಯೂಸ್‌’ನ್ನು ಉಪೇಂದ್ರ ವರದಿ ಮಾಡ್ತಾರಂತೆ!

ಅದೊಂದು ಕ್ರೆೃಮ್‌‘ನ್ಯೂಸ್‌’ನ್ನು ಉಪೇಂದ್ರ ವರದಿ ಮಾಡ್ತಾರಂತೆ!

Posted By: Staff
Subscribe to Filmibeat Kannada

ಉಪೇಂದ್ರ ಸದ್ಯದಲ್ಲೇ ಹೊಸದೊಂದು 'ನ್ಯೂಸ್‌" ನೀಡಲಿದ್ದಾರೆ. ಅವರಿಗೆ ಮನೆ, ಮದುವೆ ಮತ್ತು ಮಗು ಮೂರೂ ಆಗಿದೆ. ಇನ್ನೇನು ನ್ಯೂಸ್‌ ಕೊಡ್ತಾರೆ ಅಂತಾನಾ?. ಯಾಕೆ ತಾರೆಯರ ನ್ಯೂಸ್‌ ಅಂದ್ರೆ ಗ್ಲಾಮರ್‌ ಆಗಿರ್ಲೇ ಬೇಕಾ. ಅದು ಬಿಟ್ರೆ ಪತ್ರಕರ್ತರು ಬೇರೇನು ಬರೆಯ ಬಾರ್ದಾ! ಹಾಗಾದ್ರೆ ಉಪ್ಪಿಗೆ ಬಿಟ್ಟು ಬಿಡಿ. ಅವರೇ ವರದಿ ಮಾಡುತ್ತೇನೆ ಅಂದಿದ್ದಾರೆ. ಅದೂ ಯಶಸ್ವಿಯಾಗಿ. ಆದ್ರೆ ಅದೊಂದು ಕ್ರೆೃಮ್‌ ನ್ಯೂಸ್‌. ದಟ್ಸ್‌ ಉಪೇಂದ್ರ ಇನ್‌ 'ನ್ಯೂಸ್‌"

ಉಪೇಂದ್ರ ಅಭಿನಯದ 'ನ್ಯೂಸ್‌" ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರಲ್ಲಿ ಉಪೇಂದ್ರ ಪತ್ರಕರ್ತನ ಪಾತ್ರ. ಅರ್ಥಾತ್‌ ಕ್ರೆೃಮ್‌ ರಿಪೋರ್ಟ್‌ರ್‌. ಇಲ್ಲಾಂದ್ರೆ ಕ್ಲೈಮ್ಯಾಕ್ಸ್‌ ಹೆಂಗೆ?. ಇದಕ್ಕಿಂತ ಹೆಚ್ಚಿನ ಕಥೆಯನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ. ಕೇಳಿದ್ರೆ ಈಗ ನಾನು ನಿಮ್ಹಂಗೆ 'ಪತ್ರಕರ್ತ" ಎಂದು ಬಿಡ್ತಾರೆ. ಇದರ ನಾಯಕಿ ರೀಮಾ ಸೇನ್‌ ಪಾತ್ರವೂ 'ಪತ್ರಕರ್ತೆ". ಈ ಪತ್ರಕರ್ತರ ಜೋಡಿ ಚಿತ್ರದಲ್ಲಿ ಕ್ರೈಂ ರಿಪೋರ್ಟ್‌ ಕೆಲಸ ಮಾಡುತ್ತದೆ ಎನ್ನುವುದು ನೈಜ ಪತ್ರಕರ್ತರಿಗೆ ಅವರು ಬಿಟ್ಟುಕೊಟ್ಟ ವಿಚಾರ.

ಈ ನಡುವೆ ಉಪೇಂದ್ರ ಚಿತ್ರಗಳಿಗೆ ಒಂದು ಸಣ್ಣ ಬ್ರೇಕ್‌ ಬಿದ್ದಿತ್ತು . ಆ ಬಳಿಕ 'ಓಂಕಾರ" ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದರು. ಆದರೆ'ಓಂಕಾರ" ಬಿಡುಗಡೆಯ ಮುನ್ನವೇ 'ನ್ಯೂಸ್‌" ಹಾಗೂ 'ಉಪ್ಪಿ ದಾದಾ ಎಂ.ಬಿ.ಬಿಎಸ್‌" ಚಿತ್ರಗಳು ಸೆಟ್ಟೇರಿವೆ. ಅಲ್ಲದೇ ಉಪೇಂದ್ರ ಅಭಿನಯದ ಇನ್ನೂ ಹಲವು ಚಿತ್ರಗಳು ಸೆಟ್ಟೇರುವ ಸೂಚನೆಯಿದೆ.

ನ್ಯೂಸ್‌ ಚಿತ್ರದಲ್ಲಿ ಇನ್ನೂ ಇಬ್ಬರು ನಾಯಕಿಯರು. ರೇಣುಕಾ ಮೆನನ್‌ ಹಾಗೂ ಅಮೃತಾ ಸಹ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಗೋಪಿ, ಶ್ರೀರಾಮ್‌ ಹಾಗೂ ಕುಮಾರ್‌ನಿರ್ಮಿಸುತ್ತಿದ್ದಾರೆ. ಚಿತ್ರದ ನಿರ್ದೇಶನ ಎಂ.ಕೆ ಮಹೇಶ್ವರ್‌. ಕಥೆ ಹಾಗೂ ಚಿತ್ರ ಕಥೆ ಕೂಡ ಅವರದ್ದು. ಹಳೆ ಗೆಳೆಯ ಗುರುಕಿರಣ್‌ ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಇದೇ 'ನ್ಯೂಸ್‌"!

English summary
Upendra is performing as reporter in NEWS, kannada movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada