»   » ಬೆಳ್ಳಿತೆರೆ ಮೇಲೆ ಸುದೀಪ್‌ರ ‘ತಿರುಪತಿ’ ಮಹಾತ್ಮೆ!

ಬೆಳ್ಳಿತೆರೆ ಮೇಲೆ ಸುದೀಪ್‌ರ ‘ತಿರುಪತಿ’ ಮಹಾತ್ಮೆ!

Subscribe to Filmibeat Kannada

‘ಮೈ ಆಟೋಗ್ರಾಫ್‌’ ಚಿತ್ರದ ನಂತರ ಸುದೀಪ್‌ರ ಹೊಸ ಚಿತ್ರ ‘ತಿರುಪತಿ’ ಶುಕ್ರವಾರ(ಜೂ.30) ಚಿತ್ರಮಂದಿರಕ್ಕೆ ಬಂದಿದೆ.

ಪದ್ಮಾ ಆರ್‌.ಎಸ್‌.ಗೌಡ ನಿರ್ಮಾಣದ ಈ ಚಿತ್ರದ ನಿರ್ದೇಶಕರು ಶಿವಮಣಿ. ‘ಸೆವೆನ್‌ ಓ ಕ್ಲಾಕ್‌’ ಚಿತ್ರದ ಮೂಲಕ ಕನ್ನಡ ರಜತಪರದೆ ಏರಿರುವ ಪೂಜಾ ಕನ್ವಲ್‌(ಮುಂಬಯಿ ಮೂಲದ ರೂಪದರ್ಶಿ ಕಮ್‌ ನಟಿ) ಚಿತ್ರದ ನಾಯಕಿ. ‘ಮಾಸ್‌ ಪೊಲೀಸ್‌’ ಎನ್ನುತ್ತಿದೆ ಚಿತ್ರದ ಅಡಿ ಬರಹ. ಕೆಲವೇ ದಿನಗಳಲ್ಲಿ ‘ತಿರುಪತಿ’ ಹಣೆಬರಹ ಬರೆಯಲಿದ್ದಾನೆ ಪ್ರೇಕ್ಷಕ ಬ್ರಹ್ಮ.

ಮೊದಲ ಬಾರಿಗೆ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಸುದೀಪ್‌, ಚಿತ್ರದ ಬಗ್ಗೆ ಭಾರೀ ವಿಶ್ವಾಸ ಇಟ್ಟುಕೊಂಡಿದ್ದಾರೆ. ಎಲ್ಲೋ ಒಂದೆರಡು ಯಶಸ್ಸುಗಳನ್ನು ಹೊರತುಪಡಿಸಿ, ಸುದೀಪ್‌ ಸೋಲಿನ ದಾರಿಯಲ್ಲಿ ಸೋತು ಸುಣ್ಣವಾಗಿದ್ದರು.

ಈ ನಡುವೆ ‘ಮೈ ಆಟೋಗ್ರಾಫ್‌’ ಚಿತ್ರದ ಮೂಲಕ ನಿರ್ದೇಶನಕ್ಕೂ ಕಾಲಿಟ್ಟರು. ಚಿತ್ರ ಅಪಾರ ಯಶಸ್ಸು ಕಂಡ ನಂತರ ಮತ್ತೆ ಹೊಸ ಹುರುಪಿನೊಂದಿಗೆ ಪುಟಿಯುತ್ತಿದ್ದಾರೆ. ದರ್ಶನ್‌ನ ಮಚ್ಚಿನ ಚಿತ್ರಗಳ ಮೆಚ್ಚುವ ಅಭಿಮಾನಿಗಳನ್ನು ‘ತಿರುಪತಿ’ ಸೆಳೆದರೆ, ಸಕ್ಸಸ್‌ ಖಚಿತ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada