»   » ಜುಲೈ 2ರಂದು ಕೇಕ್ ಕಟ್ ಮಾಡಲಿರುವ ಗಣೇಶ

ಜುಲೈ 2ರಂದು ಕೇಕ್ ಕಟ್ ಮಾಡಲಿರುವ ಗಣೇಶ

Posted By:
Subscribe to Filmibeat Kannada


ಹಣದ ಮಳೆ, ಅವಕಾಶಗಳ ಮೆಳೆ, ಹೊಟ್ಟೆಕಿಚ್ಚಿನ ಮಳೆ ಸುರಿಸಿದ ಮುಂಗಾರಿನ ನಾಯಕ ಗಣೇಶ್ ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈಗ ಅವರ ಮೇಲೆ ಶುಭಾಶಯಗಳ ಮಳೆ, ಅಭಿಮಾನದ ಮಳೆ ಸುರಿಸುವ ಸರದಿ ಪ್ರೇಕ್ಷಕರದು.

ಮುಂಗಾರು ಮಳೆ ಮಾಡಿದ್ದೇ ಮಾಡಿದ್ದು ದಿನ ಬೆಳಗಾಗುವುದರೊಳಗಾಗಿ ಗಣೇಶ್ ಸ್ಟಾರ್ ಆಗಿ ಬಿಟ್ಟ ಅಂತ ಎಲ್ಲಾ ಮಾತಾಡ್ಕೋತಾ ಇರ್ತಾರೆ. ಆದರೆ, ನೆನಪಿರಲಿ ಗಣೇಶ ಒಂದೇ ಚಿತ್ರದಿಂದ ಸ್ಟಾರ್ ಆಗಿಲ್ಲ. ಏನಿಲ್ಲವೆಂದರೂ 8ರಿಂದ 10 ವರ್ಷ ಚಿತ್ರರಂಗದಲ್ಲಿ ಸೈಕಲ್ ಹೊಡೆದಿದ್ದಾರೆ ಎಂದರೆ ಕೆಲವರು ನಂಬಲಿಕ್ಕಿಲ್ಲ.

ಮುಂಗಾರು ಮಳೆ ಯಶಸ್ಸಿಗೆ ಗಣೇಶ ಮಾತ್ರವಲ್ಲ ಇಡೀ ಚಿತ್ರ ಶ್ರಮಪಟ್ಟಿದೆ. ಮಳೆಯಲ್ಲಿ ಸತತವಾಗಿ ತೊಯ್ದಿದೆ, ಸಕಲೇಶಪುರ ಕಾಡುಗಳಲ್ಲಿ ಜಿಗಣೆಗಳಿಂದ ರಕ್ತ ಹೀರಿಸಿಕೊಂಡಿದೆ, ಸುರಿಯುತ್ತಿರುವ ಮಳೆಯಲ್ಲಿ ನಟರ ಮೇಕಪ್ ಹಾಳಾಗದಂತೆ ಸತತವಾಗಿ ಕೊಡೆಹಿಡಿರುವ ಕೈಗಳಿವೆ, ರಿಫ್ಲೆಕ್ಟರ್-ಲೈಟು, ಕ್ಯಾಮೆರಾ ಹಿಡಿದಿರುವ ಕೈಗಳು, ಹಗಲು ರಾತ್ರಿ ಊಟ ನಿದ್ರೆ ಬಿಟ್ಟು ದುಡಿದ ಸಹಾಯಕ ಕೈಗಳಿವೆ. ಪಂಚಿಂಗ್ ಡೈಲಾಗು, ತಲೆಚಿಟ್ಟುಹಿಡಿಸದ ಮಳೆ, ಹಿಮಬಿಳುಪಿನ ದೇವದಾಸ್‌... ಒಟ್ಟಾರೆ ಇದು ತಂಡದ ಯಶಸ್ಸು. ಅಂತಿಮವಾಗಿ ಗೆಲ್ಲಿಸಿಕೊಟ್ಟಿದ್ದು ಪ್ರೇಕ್ಷಕ.

ಇಂಥ ಹಣದ ಮಳೆ, ಅವಕಾಶಗಳ ಮೆಳೆ, ಹೊಟ್ಟೆಕಿಚ್ಚಿನ ಮಳೆ ಸುರಿಸಿದ ಮುಂಗಾರಿನ ನಾಯಕ ಗಣೇಶ್ ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈಗ ಅವರ ಮೇಲೆ ಶುಭಾಶಯಗಳ ಮಳೆ, ಅಭಿಮಾನದ ಮಳೆ ಸುರಿಸುವ ಸರದಿ ಪ್ರೇಕ್ಷಕರದು.

ಮೊಬೈಲ್ ಕೈಯಲ್ಲಿದ್ದರೆ ಸಂದೇಶ ಕಳಿಸುವುದು ಇನ್ನೂ ಸರಾಗ. ಸಿಜಿ ಎಂದು ಬರೆದು ಸಂದೇಶ ಟೈಪಿಸಿ 667770ಗೆ ಎಸ್‌ಎಮ್‌ಎಸ್ ಮುಖಾಂತರ ಹಾರೈಸಬಹುದು. ಆಟೋಗ್ರಾಫ್ ಮಾಡಿದ ಸಿ‌ಡಿ ಗೆಲ್ಲುವ ಅವಕಾಶ ಕೂಡ ನಿಮಗಿದೆ.

ಇನ್ನೇಕೆ ತಡ. ಗಣೇಶ್‌ರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಶುರು ಮಾಡಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada