»   » ಶ್ರೀನಿವಾಸಪುರದಲ್ಲಿ ಚಿರಂಜೀವಿ-ಬಾಲಕೃಷ್ಣ ಅಭಿಮಾನಿಗಳ ಗಲಾಟ

ಶ್ರೀನಿವಾಸಪುರದಲ್ಲಿ ಚಿರಂಜೀವಿ-ಬಾಲಕೃಷ್ಣ ಅಭಿಮಾನಿಗಳ ಗಲಾಟ

Posted By: Staff
Subscribe to Filmibeat Kannada

ಶ್ರೀನಿವಾಸಪುರ : ತೆಲುಗು ಸೂಪರ್‌ಸ್ಟಾರ್‌ಗಳಾದ ಚಿರಂಜೀವಿ ಹಾಗೂ ಬಾಲಕೃಷ್ಣ ಅವರ ಅಭಿಮಾನಿಗಳು ಮಾರಾಮಾರಿ ನಡೆಸಿದ ಸಿನಿಮೀಯ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲಪಾಡು ಗ್ರಾಮದಲ್ಲಿ ನಡೆದಿದೆ.

ರಾಯಲುಪಾಡುವಿನಲ್ಲಿ ಚಿರಂಜೀವಿ ಅಭಿನಯದ ಇಂದ್ರ ಸಿನಿಮಾದ ಕೆಸೆಟ್‌ ಬಿಡುಗಡೆ ಸಂಬಂಧ ಏರ್ಪಡಿಸಿದ್ದ ಸಂತೋಷಕೂಟದಲ್ಲಿ ಈ ಗಲಾಟೆ ಸಂಭವಿಸಿದೆ. ಸಿನಿಮಾ ನೋಡಿಕೊಂಡು ವಾಹನಗಳಲ್ಲಿ ಹೋಗುತ್ತಿದ್ದ ಗೌವನಪಲ್ಲಿಯ ಬಾಲಕೃಷ್ಣ ಅಭಿಮಾನಿಗಳು ಚಹಾ ಕುಡಿಯಲು ಬಂದಾಗ- ಅಲ್ಲಿಯೇ ಇದ್ದ ಚಿರಂಜೀವಿ ಅಭಿಮಾನಿಗಳೊಂದಿಗೆ ಉಂಟಾದ ಮಾತಿನ ಚಕಮಕಿ ಘರ್ಷಣೆಗೆ ತಿರುಗಿದೆ.

ಎರಡೂ ಗುಂಪುಗಳು ಮಾರಕಾಸ್ತ್ರಗಳಿಂದ ಹೊಡೆದಾಡುತ್ತಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ ಅನಾಹುತ ತಪ್ಪಿಸಿದ್ದಾರೆ. ಚಿರಂಜೀವಿ ಹಾಗೂ ಬಾಲಕೃಷ್ಣ ಇಬ್ಬರಿಗೂ ತಾಲ್ಲೂಕಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಅಂದಹಾಗೆ, ಕರ್ನಾಟಕದಲ್ಲೇ ಇರುವ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ !
(ಇನ್ಫೋ ವಾರ್ತೆ)

English summary
Clash between Chiranjivi and Balakrishna fans in Srinivasapura
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada