»   » ಮಕ್ಕಳಿಗೆ ‘ಮ್ಯಾಜಿಕ್‌ ಅಜ್ಜಿ’ ಗಿಫ್ಟ್‌-ಖುಷ್ಬೂ

ಮಕ್ಕಳಿಗೆ ‘ಮ್ಯಾಜಿಕ್‌ ಅಜ್ಜಿ’ ಗಿಫ್ಟ್‌-ಖುಷ್ಬೂ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಇನ್ನು ಮರಗಳ ಸುತ್ತೋ ಕಾಲ ಮುಗಿಯಿತು. ಇದ್ದುದರಲ್ಲಿ ನನ್ನ ಗಾತ್ರ, ತೂಕದ ನಡುವೆಯೂ ಮಿಂಚುವಂಥ ಅವಕಾಶ ಇರುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ಖುಷ್‌ಬೂ ಈಗ ‘ಮ್ಯಾಜಿಕ್‌ ಅಜ್ಜಿ’.

ಇಷ್ಟು ಬೇಗ ಅಜ್ಜಿ ಪಾತ್ರ ಒಪ್ಪಿಕೊಳ್ಳಬಾರದಿತ್ತು ಅಂತ ಚೆನ್ನೈನಲ್ಲಿ ಖುಷ್‌ಬೂಗೆ ದೇವಸ್ಥಾನ ಕಟ್ಟಿದ ಭಕ್ತಾದಿಗಳದ್ದು ಒಂದೇ ವರಾತ. ಅದಕ್ಕೆ ತಣ್ಣಗೇ ಉತ್ತರಿಸಿರುವ ಖುಷ್‌ಬೂ, ಆ ಪಾತ್ರ ನೋಡಿ ಆಮೇಲೆ ಮಾತಾಡಿ ಅಂತ ಸಸ್ಪೆನ್ಸ್‌ ಉತ್ತರ ಕೊಟ್ಟಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳ ತಾಯಿ ಖುಷ್‌ಬೂಗಂತೂ ‘ಮ್ಯಾಜಿಕ್‌ ಅಜ್ಜಿ’ ಸಖತ್‌ ಖುಷಿ ಕೊಟ್ಟಿದೆ. ಅದರಲ್ಲಿ ತನ್ನದು 100 ವರ್ಷ ವಯಸ್ಸಿನ ಅಜ್ಜಿಯ ಪಾತ್ರವಾದರೂ ಮಕ್ಕಳಿಗೆ ಬೇಕಾದ ಫ್ಯಾಂಟಸಿ ಅದರಲ್ಲಿದೆ. ಚಿತ್ರದಲ್ಲಿ ಪೂರ್ತಿ ಅಜ್ಜಿಯಾಗಿಲ್ಲ. ಒಮ್ಮೆ ಹಳ್ಳಿ ಹುಡುಗಿಯಾಗಿ, ಮತ್ತೊಮ್ಮೆ ಗಗನಸಖಿಯಾಗಿ ಕಾಣಿಸಿಕೊಳ್ಳುವ ಅವಕಾಶವನ್ನೂ ನಿರ್ದೇಶಕರು ಕೊಟ್ಟಿದ್ದಾರೆ. ಅದಕ್ಕೆ ಥ್ಯಾಂಕ್ಸ್‌ ಅಂತಾರೆ ಖುಷ್‌ಬೂ.

ಹ್ಯಾರಿ ಪಾಟರ್‌ ಹಾಗೂ 3ಡಿ ಸಿನಿಮಾ ಗುಂಗಲ್ಲಿರುವ ನನ್ನ ಮಕ್ಕಳು ಏನಾದರೂ ಕಥೆ ಹೇಳಮ್ಮ ಅಂತ ಕೇಳಿದರೆ, ಮ್ಯಾಜಿಕ್‌ ಅಜ್ಜಿ ಕ್ಯಾಸೆಟ್‌ ಹಾಕಿ ಟೀವಿ ಮುಂದೆ ಕೂರಿಸುತ್ತೇನೆ. ಈ ಚಿತ್ರ ನನ್ನ ಮಕ್ಕಳಿಗೆ ನನ್ನ ಕೊಡುಗೆ ಅಂತ ಖುಷ್‌ಬೂ ನಗುತ್ತಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada