»   » ಕನ್ನಡ ಚಿತ್ರಗಳ ಅಭಿವೃದ್ಧಿಗಾಗಿ ಸಮಿತಿ

ಕನ್ನಡ ಚಿತ್ರಗಳ ಅಭಿವೃದ್ಧಿಗಾಗಿ ಸಮಿತಿ

Posted By: Staff
Subscribe to Filmibeat Kannada

ಬೆಂಗಳೂರು : ಯಾಂದನ್ನು ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಚಿತ್ರೋದ್ಯಮದ ಪ್ರತಿನಿಧಿಗಳು, ತಜ್ಞರು ಹಾಗೂ ಶಾಸಕರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿ ಕನ್ನಡ ಚಿತ್ರೋದ್ಯಮದ ಪ್ರಗತಿಯ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ. ಸಮಿತಿ ರಚನೆಯ ಬಗೆಗೆ ಆರ್ಥಿಕ ಹಾಗೂ ವಾರ್ತಾ ಸಚಿವಾಲಯಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಶ್ರುವಾರ (ಜು.30) ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಡಿಸೆಂಬರ್‌ 2003ರವರೆಗಿನ ಕನ್ನಡ ಚಿತ್ರಗಳ ಸುಮಾರು 4 ಕೋಟಿ ರುಪಾಯಿ ಸಬ್ಸಿಡಿಯನ್ನು ಆಗಸ್ಟ್‌-ಸೆಪ್ಟಂಬರ್‌ ಒಳಗೆ ಚುಕ್ತಾ ಮಾಡಲಾಗುವುದು ಎಂದು ಖರ್ಗೆ ಹೇಳಿದರು. ರಾಜ್ಯ ಬಜೆಟ್‌ 2004-05ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸದಸ್ಯ ಮುಖ್ಯಮಂತ್ರಿ ಚಂದ್ರು ಹಾಗೂ ಕಾಂಗ್ರೆಸ್‌ನ ಉಮಾಶ್ರೀ ಅವರ ಗಮನ ಸೆಳೆಯುವ ಪ್ರಶ್ನೆಗೆ ಖರ್ಗೆ ಪ್ರತಿಕ್ರಿಯಿಸುತ್ತಿದ್ದರು.

ಪರಭಾಷಾ ಚಿತ್ರಗಳ ಮೇಲಿನ ಮನರಂಜನಾ ತೆರಿಗೆಯನ್ನು ಶೇ.70ರಿಂದ 40ಕ್ಕೆ ಕಡಿತಗೊಳಿಸುವ ಸರ್ಕಾರದ ಕ್ರಮ ಕನ್ನಡ ಚಿತ್ರಗಳ ಹಿತಾಸಕ್ತಿಗೆ ಮಾರಕವಾದುದು. ಆದುದರಿಂದ ಪ್ರಸಕ್ತ ತೆರಿಗೆ ನೀತಿಯನ್ನೇ ಉಳಿಸಿಕೊಳ್ಳಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಖರ್ಗೆ- ಈ ವಿಷಯವನ್ನು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ಧರಾಮಯ್ಯನವರ ಗಮನಕ್ಕೆ ತರುವುದಾಗಿ ಹೇಳಿದರು.(ಪಿಟಿಐ)

English summary
Karnataka Government constitute a committee for the development of Kannada films,Water Resources Minister Mallikarjun Kharge assured the Legislative Council on July 30th 2004

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada