»   » ಸಾಯಿಯಾಂದಿಗೆ ಸುದೀಪ್‌ ‘ಮಹಾರಾಜ್‌’

ಸಾಯಿಯಾಂದಿಗೆ ಸುದೀಪ್‌ ‘ಮಹಾರಾಜ್‌’

Posted By: Staff
Subscribe to Filmibeat Kannada
Sudeep
ಶಿವರಾಜ್‌ ಅಭಿನಯದ 'ಸಾರ್ವಭೌಮ" ಚಿತ್ರ ಬಿಡುಗಡೆಯಾಗುತ್ತಿರುವಂತೆಯೇ, ಅದೇ ಅರ್ಥದ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ. ಚಿತ್ರದ ಹೆಸರು 'ಮಹಾರಾಜ" ; ನಾಯಕ ನಟ ಸುದೀಪ್‌.

ಸುದೀಪ್‌ಗೆ ಎರಡಕ್ಷರದ ಚಿತ್ರಗಳೆಂದರೆ ಒಂಥರಾ ಮೋಹ. ಸ್ಪರ್ಶ, ಹುಚ್ಚ, ವಾಲಿ, ಕಿಚ್ಚ , ಹೀಗೆ ಸುದೀಪ್‌ಗೂ ಎರಡಕ್ಷಗಳ ಚಿತ್ರಕ್ಕೂ ಅಂಟುನಂಟು. ಈ ನಂಟು ಮುರಿದದ್ದು ನಾಲ್ಕಕ್ಷರದ ಸ್ವಾತಿಮುತ್ತು ಚಿತ್ರ. ಸುದೀಪ್‌ ಅಭಿನಯದ, ಚಿತ್ರೀಕರಣ ಅಂತಿಮ ಹಂತದಲ್ಲಿರುವ 'ನಲ್ಲ" ಚಿತ್ರ ಕೂಡ ಎರಕ್ಷರದ್ದೇ.

ಸಂಖ್ಯಾಶಾಸ್ತ್ರದ ಪುರಾಣ ಪಕ್ಕಕ್ಕಿರಲಿ. 'ಮಹಾರಾಜ"ದ ಪ್ರವರ ಕೇಳೋಣ ಬನ್ನಿ :
ಮಹಾರಾಜ ಚಿತ್ರವನ್ನು ನಿರ್ಮಿಸುತ್ತಿರುವವರು ಆರ್‌.ಎಸ್‌.ಗೌಡ. ಯಜಮಾನ ಎನ್ನುವ ಸೂಪರ್‌ಹಿಟ್‌ ಚಿತ್ರ, ತವರಿಗೆ ಬಾ ತಂಗಿ ಎನ್ನುವ ಕಣ್ಣೀರ ಧಾರೆಯ ಚಿತ್ರವನ್ನು ನಿರ್ಮಿಸಿದ್ದ ಆರ್‌.ಎಸ್‌.ಗೌಡ ಕೈತುಂಬಾ ದುಡ್ಡು ಮಾಡಿಕೊಂಡಿದ್ದರು. ಆದರೆ ತಂಗಿಯನ್ನು ತಮಿಳು , ತೆಲುಗಿನಲ್ಲಿ ನಿರ್ಮಿಸಿದ ಗೌಡ ಒಂದಷ್ಟು ದುಡ್ಡು ಕಳಕೊಂಡರು. ಹೀಗಾಗಿ ಮರಳಿ ಕನ್ನಡಕ್ಕೆ ಬಂದಿರುವ ಆರ್‌.ಎಸ್‌.ಗೌಡ, ಸುದೀಪ್‌ ಮಹಾರಾಜ್‌ ಮೇಲೆ ಬಾಜಿಕಟ್ಟಿದ್ದಾರೆ.

ಗೌಡರ ನೆಚ್ಚಿನ ನಿರ್ದೇಶಕ ಸಾಯಿಪ್ರಕಾಶ್‌ 'ಮಹಾರಾಜ" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಯಿಪ್ರಕಾಶ್‌ ಹೇಳುವಂತೆ ಇದೊಂದು ಪಕ್ಕಾ ಸೆಂಟಿಮೆಂಟಲ್‌ ಚಿತ್ರ. ಸೆಂಟಿಮೆಂಟಲ್‌ ಎಂದಮಾತ್ರಕ್ಕೆ ಮನರಂಜನೆ ಅಂಶಗಳಿಗೆ ಕೊರತೆ ಎಂದಲ್ಲ . ಸುದೀಪ್‌ ಇಮೇಜು ಹಾಗೂ ಕಥೆಯ ಮೈಲೇಜು ಸಮತೂಕದಲ್ಲಿದೆ ಎನ್ನುತ್ತಾರೆ ಸಾಯಿ.

ಮಹಾಭಾರತದ ಕರ್ಣ ಗೊತ್ತಲ್ಲ , ಅಂಥದ್ದೊಂದು ತೂಕದ ಪಾತ್ರದಲ್ಲಿ ಸುದೀಪ್‌ ನಟಿಸುತ್ತಿದ್ದಾರೆ. ನೋಡುತ್ತಾ ಇರಿ, ಆತನ ಇಮೇಜೇ ಬದಲಾಗಿಹೋಗುತ್ತದೆ ಎಂದು ಸಾಯಿಪ್ರಕಾಶ್‌ ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಕರ್ಣ ಎಂದಧಿಮೇಲೆ ಕುಂತಿ ಇರಬೇಕಲ್ಲ . ಹೌದು, 'ಮಹಾರಾಜ" ಚಿತ್ರದಲ್ಲಿ ಕುಂತಿಯೂ ಇದ್ದಾಳೆ. ಈ ಮಹಾತಾಯಿ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್‌ ನಟಿಸುತ್ತಿದ್ದಾರೆ.

ಆಗಸ್ಟ್‌ 5ರಿಂದ 'ಮಹಾರಾಜ" ಚಿತ್ರೀಕರಣ ಶುರು. ಶೂಟಿಂಗ್‌ ಬಹುತೇಕ ಹಳ್ಳಿ ಪರಿಸರದಲ್ಲೇ ನಡೆಯಲಿದೆ. ಸೆಂಟಿಮೆಂಟ್‌ ಎಂದಮೇಲೆ ಹಳ್ಳಿ ಇರದಿದ್ದರೆ ಹೇಗೆ ?

English summary
Sudeep starer new Kannada film 'Maharaja' shooting starts on Aug. 5, 2004

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada