»   » ಯುವ ಪ್ರತಿಭಾವಂತನಿಗೊಂದು ಅಪರೂಪದ ಅವಕಾಶ!

ಯುವ ಪ್ರತಿಭಾವಂತನಿಗೊಂದು ಅಪರೂಪದ ಅವಕಾಶ!

Posted By: Staff
Subscribe to Filmibeat Kannada

'ಮೆಜೆಸ್ಟಿಕ್‌" ಹಿಟ್ಟಾದದ್ದೇ ತಪ್ಪೆನ್ನುವಂತೆ ಮಾರಾಮಾರಿ ಚಿತ್ರಗಳ ನಿರ್ಮಾಪಕರು ದರ್ಶನ್‌ಗೆ ಮುಗಿಬಿದ್ದರು. ಗಾಜ ಗೋಲಿ ಕಣ್ಣುಗಳ ಎತ್ತರದ ತೆಳ್ಳನೆಯ ಈ ಹುಡುಗ ರಫ್‌ ಅಂಡ್‌ ಟಫ್‌ ಕ್ಯಾರೆಕ್ಟರ್‌ಗಳಿಗಷ್ಟೇ ಸೈ ಎಂದು ಗಾಂಧಿನಧಿಗರದ ಪಂಡಿತರು ತೀರ್ಮಾನಿಸಿಬಿಟ್ಟರು.

ಮೆಜೆಸ್ಟಿಕ್‌ ನಂತರ ದರ್ಶನ್‌ಗೆ ಸಿಕ್ಕ ಅವಕಾಶಗಳಾದರೂ ಎಂಥವು. 'ಕರಿಯ" ಅಪ್ಪಟ ಭೂಗತ ಜಗತ್ತಿನ ಕಥೆ. 'ಧ್ರುವ" ಕೂಡ ಮಾರಾಮಾರಿ ಮಸಾಲೆಯ ಕಥೆ. ಇದ್ದುದರಲ್ಲಿ 'ನಿನಗೋಸ್ಕರ" ಚಿತ್ರವೇ ವಾಸಿ ; ಅದು ಪ್ರೇಮ ಚಿತ್ರ. ಈ ರೀತಿಯಾಗಿ ದರ್ಶನ್‌ ಎಂಬ ಪ್ರತಿಭೆ ಸೀಮಿತ ಅವಕಾಶಗಳ ಪರಿಧಿಯಾಳಗೆ ಹಳಹಳಿಸುತ್ತಿದ್ದಾಗ ಅವರ ಕೈ ಹಿಡಿದವರು-
ಸಾ.ರಾ.ಗೋವಿಂದು !

ಪ್ರಸ್ತುತ 'ದಡ್ರು ಸಾರ್‌ ದಡ್ರು" ಚಿತ್ರದಲ್ಲಿ ಹೀರೋ ಆಗಿ ನಟಿಸುವ ಸುಖದಲ್ಲಿರುವ ಸಾ.ರಾ.ಗೋವಿಂದು ತಮ್ಮ ಮುಂದಿನ ಚಿತ್ರ 'ಲಾಲಿ ಹಾಡು" ನಾಯಕನ ಪಾತ್ರಕ್ಕೆ ದರ್ಶನ್‌ನ ಆಯ್ಕೆ ಮಾಡಿದ್ದಾರೆ. ದರ್ಶನ್‌ ಪಾಲಿಗೆ ಇದು ಅನಿರೀಕ್ಷಿತ. ಆದರೆ, ಸಂತೋಷಪಡುವಂಥ ಅವಕಾಶ.

'ಲಾಲಿ ಹಾಡು" ತಾಯಿ-ಮಗನ ನಡುವಿನ ಕರುಳ ಸಂಬಂಧದ ಕಥೆಯ ಸಿನಿಮಾ. ತಾಯಿ ಪಾತ್ರದಲ್ಲಿ ಉಮಾಶ್ರೀ ನಟಿಸುತ್ತಿದ್ದಾರೆ. ದರ್ಶನ್‌ ಹಾಗೂ ಉಮಾಶ್ರೀ ಇಬ್ಬರಿಗೂ ಸಮಾನ ಅವಕಾಶವಿದೆಯಂತೆ. ದರ್ಶನ್‌ ತಮ್ಮ ಪ್ರತಿಭೆಯ ಮತ್ತೊಂದು ಮುಖದ ಪ್ರದರ್ಶನಕ್ಕಾಗಿ ಕಾಯುತ್ತಿದ್ದಾರೆ.

ಪ್ರಾಸಪ್ರಿಯ ಕೆ.ಕಲ್ಯಾಣ್‌ 'ಲಾಲಿ ಹಾಡು"ಗೆ ಈಗಾಗಲೇ ಎಂಟು ಹಾಡು ಬರೆದಿದ್ದಾರೆ. ಒಂದಕ್ಕಿಂಥ ಒಂದು ಸುಂದರ. ತಾಯಿ-ಮಗನ ಸಂಬಂಧದ ಬಗೆಗಿನ ಹಾಡಂತೂ ಅದ್ಭುತವಾಗಿದೆ ಎನ್ನುತ್ತಾರೆ ಬಣ್ಣದ ಅಂಗಿಯಲ್ಲಿ ಮಿಂಚುವ ಗೋವಿಂದು.

'ಲಾಲಿ ಹಾಡು" ದರ್ಶನ್‌ಗೆ ಬ್ರೇಕ್‌ ನೀಡುತ್ತಾ ? ನೀಡಲಿ ಎಂದು ಗೋವಿಂದು ಕೂಡ ಹಾರೈಸುತ್ತಿದ್ದಾರೆ. ನಿರ್ಮಾಪಕನಾಗಿ ಅವರಿಗೊಂದು ಗೆಲುವು ಬೇಕಾಗಿದೆ. ಸುದೀಪನ 'ಚಂದು" ಚಿತ್ರದ ಸೋಲಿನ ಶಾಕ್‌ನಿಂದ ಅವರು ಹೊರಬರಬೇಕಿದೆ.

English summary
Lalihaadu : Umashri to play Darshans mother
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada