»   » ಸಂಪಿಗೆ ಹಸಿರೆಲೆ ನಡುವಿನ ಕೋಗಿಲೆಗೆ ‘ಸಂಗೀತ ಗಂಗಾ’

ಸಂಪಿಗೆ ಹಸಿರೆಲೆ ನಡುವಿನ ಕೋಗಿಲೆಗೆ ‘ಸಂಗೀತ ಗಂಗಾ’

Subscribe to Filmibeat Kannada

ಬೆಂಗಳೂರು : ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು..’ ಗೀತೆಯಿಂದ ಜನಮನ ಗೆದ್ದ ಕನ್ನಡದ ಕೋಗಿಲೆ ಸುಪ್ರಿಸಿದ್ಧ ಗಾಯಕಿ ಬಿ.ಕೆ. ಸುಮಿತ್ರಾಗೆ ‘ ಸಂಗೀತ ಗಂಗಾ’ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಕನ್ನಡ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಪ್ರತಿವರ್ಷ ಸಂಗೀತ ಗಂಗಾ ಸಂಸ್ಥೆ ಗೌರವಿಸುತ್ತಿದೆ. ಖ್ಯಾತ ಗಾಯಕ ದಿವಂಗತ ಜಿ.ವಿ.ಅತ್ರಿ ಅವರ ಸಂಗೀತ ಗಂಗಾ ಸಂಸ್ಥೆಯ 2005ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸುಮಿತ್ರಾ ಅವರಿಗೆ ಸಂದಿದೆ.

ಸಂಗೀತ ಗಂಗಾ ಸಂಸ್ಥೆಯ 12ನೇ ವರ್ಷದ ಸಂಭ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್‌ 2ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.

ಸಚಿವ ಪಿ.ಜಿ.ಆರ್‌.ಸಿಂಧ್ಯ ಸಮಾರಂಭವನ್ನು ಉದ್ಘಾಟಿಸುವರು. ಹಿರಿಯ ಗಾಯಕ ಎಚ್‌.ಕೆ. ನಾರಾಯಣ ಅಧ್ಯಕ್ಷತೆವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌, ಜಯಲಕ್ಷ್ಮಿ, ವಿಜಯಭಾಸ್ಕರ್‌ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಬಿ.ಕೆ.ಸುಮಿತ್ರಾ ಅವರ ಪುತ್ರ ಸುನಿಲ್‌ ಗಾಯಕನೂ ಹೌದು, ನಾಯಕನೂ ಹೌದು. ಈಗಾಗಲೇ ‘ಬಾ ಬಾರೋ ರಸಿಕ’, ‘ಮಸಾಲ’ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada