»   » ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗ?

Posted By:
Subscribe to Filmibeat Kannada


ನವದೆಹಲಿ, ಆಗಸ್ಟ್ 30 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗದ ವ್ಯಾಪಾರಿ ವಹಿವಾಟು 8.5 ಶತಕೋಟಿ ರೂಪಾಯಿಗಳಷ್ಟಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯ ರಂಜನ್ ದಾಸ್ ಮುನ್ಷಿ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಅವರು, ಶೇ.18ರ ದರದಲ್ಲಿ ಭಾರತೀಯ ಚಿತ್ರಜಗತ್ತು ವಿಶ್ವ ಮಾರುಕಟ್ಟೆಯಲ್ಲಿ ಬೆಳೆಯುತ್ತಿದೆ ಎಂದರು.

ಭಾರತೀಯ ಚಲನಚಿತ್ರಗಳಿಗೆ ಯೂರೋಪ್, ಉತ್ತರ ಅಮೇರಿಕ, ಜಪಾನ್ ಮತ್ತು ಚೈನಾದಲ್ಲಿ ಬಾರೀ ಬೇಡಿಕೆ ಇದೆ. ಲ್ಯಾಟಿನ್ ಅಮೆರಿಕ ಭಾರತೀಯ ಚಿತ್ರಗಳ ಹೊಸ ಮಾರುಕಟ್ಟೆಯಾಗಿ ಬೆಳೆಯುತ್ತಿದೆ, ಯುಎಸ್ ನಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಭಾರತೀಯ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಭಾರತೀಯ ಚಿತ್ರಗಳು ಸಾಮಾನ್ಯವಾಗಿ ತ್ರಿಕೋನ ಪ್ರೇಮ ಕತೆಗಳಿಗೆ, ಹಾಡು, ಹಾಸ್ಯ, ನೃತ್ಯ ಹಾಗು ಥ್ರಿಲ್ಲರ್‍ಗೆ ಹೆಸರಾಗಿವೆ. ಹಾಗೆಯೆ ಭಾರತೀಯ ಚಿತ್ರರಂಗ ಇಟಲಿ, ಬ್ರೆಜಿಲ್, ಜರ್ಮನಿ, ಬ್ರಿಟನ್ನಿನಲ್ಲಿ ಚಿತ್ರಗಳನ್ನು ನಿರ್ಮಿಸಲು ಕರಾರನ್ನು ಮಾಡಿಕೊಂಡಿದೆ ಎಂದು ಸಚಿವರು ತಿಳಿಸಿದರು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada