»   » ನರಳುತ್ತಲೇ ಈ ಲೋಕಕ್ಕೆ ವಿದಾಯ ಹೇಳಿದ ನೀಗ್ರೋ ಜಾನಿ!

ನರಳುತ್ತಲೇ ಈ ಲೋಕಕ್ಕೆ ವಿದಾಯ ಹೇಳಿದ ನೀಗ್ರೋ ಜಾನಿ!

Posted By: Staff
Subscribe to Filmibeat Kannada
Kannada Actor Nigro Johny
ಬೆಂಗಳೂರು, ಆಗಸ್ಟ್ 30 : ಕನ್ನಡ ಚಿತ್ರರಂಗದ ಹೆಸರಾಂತ ಖಳನಾಯಕ ನೀಗ್ರೋ ಜಾನಿ ಗುರುವಾರ ಮಧ್ಯಾಹ್ನ ನಿಧನರಾದರು. ಎರಡು ದಶಕಕ್ಕೂ ಹೆಚ್ಚು ಕಾಲ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದ ನೀಗ್ರೋ ಜಾನಿ, ಕಿಡ್ನಿ ವೈಫಲ್ಯದಿಂದ ದೀರ್ಘಕಾಲದಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದರು. ಕಣ್ಣು ಕಳೆದುಕೊಂಡು ಸಂಕಷ್ಟದ ಬದುಕನ್ನು ಸವೆಸಿದ್ದರು.

ಕಂಚಿನ ಕಂಠ, ಕಟ್ಟುಮಸ್ತು ದೇಹ, ಮೊನಚು ನೋಟ ಇವಿಷ್ಟನ್ನೂ ಬಂಡವಾಳವಾಗಿಟ್ಟುಕೊಂಡು ಕನ್ನಡ ಸಿನಿಮಾ ಸಹೃದಯರ ಜನಮನದಲ್ಲಿ ನಿಂತ ನೀಗ್ರೋ ಜಾನಿ, ಇನ್ನು ನೆನಪು ಮಾತ್ರ. ಸಿನಿಮಾಗಳಲ್ಲಿ ದುಷ್ಟ, ರೌಡಿ, ಕಿಲ್ಲರ್, ಕೆಡುಕನ ಪಾತ್ರಗಳಿಗೆ ಜೀವ ತುಂಬುತ್ತಿದ್ದ ನೀಗ್ರೋ ಜಾನಿ ನಿಜ ಬದುಕಿನಲ್ಲಿ ಅತಿ ಸಭ್ಯ. ಸಜ್ಜನ, ಸ್ನೇಹಜೀವಿ.

ಕೊನೆ ಕಾಲದಲ್ಲಿ ಚಿಕಿತ್ಸೆಗೆ ಕಾಸಿಲ್ಲದೇ, ಸಾವನ್ನು ಎದುರು ನೋಡುತ್ತಾ ಬದುಕಿದ ನೀಗ್ರೋ ಜಾನಿಯನ್ನು, ಕನ್ನಡ ಚಿತ್ರರಂಗ ಕೊನೆ ಕಾಲದಲ್ಲಿ ಮರೆತದ್ದು ನಿಜಕ್ಕೂ ವಿಪರ್ಯಾಸ. ನೀಗ್ರೋ ಜಾನಿಗೆ ಚಿರಶಾಂತಿ ಸಿಗಲಿ.. ಭೂಮಿಗೆ ಬಿದ್ದ ಕಲಾವಿದರನ್ನು ಕೈಹಿಡಿದು ಎತ್ತುವ ಮನಸ್ಥಿತಿ ನಮ್ಮ ಚಿತ್ರರಂಗದ ಗಣ್ಯರಿಗೆ ಬರಲಿ ಎಂಬುದು ದಟ್ಸ್ ಕನ್ನಡ ಆಶಯ.

English summary
Noted Kannada Actor Nigro Johny passes away on Thursday(Aug.30).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada