»   » ರಾಧಿಕಾ ಅನಾಥರಿಂದ ಅನಾಥಾಶ್ರಮಕ್ಕೆ..!

ರಾಧಿಕಾ ಅನಾಥರಿಂದ ಅನಾಥಾಶ್ರಮಕ್ಕೆ..!

Subscribe to Filmibeat Kannada


ಅಂದ ಹಾಗೆ ನಿಮ್ಮ ಮದುವೆ..., ದೇವರಲ್ಲಿ ಏನು ಕೇಳಿದಿರಿ ಎಂದು ಪತ್ರಕರ್ತರು ಕೊಂಚ ಅಂಜುತ್ತಲೇ ಕೇಳಿದರೆ ಅದೇನು ಹಾಗೆಲ್ಲ ಸುಲಭವೇ, ಕಂಕಣಬಂಧ ಕೂಡಿಬರಬೇಕಲ್ಲ ಎಂದು ವೇದಾಂತ ಆಡಿದ್ದಾರೆ. ಸದ್ಯಕ್ಕೆ ವಿವಾಹ ವಾಗುವುದಿಲ್ಲ. ದೇವರ ಇಚ್ಛೆ ಇದ್ದಂತೆ ಆಗುತ್ತದೆ ಎಂದು ವಿರಾಗಿಯಂತೆ ನುಡಿದಿದ್ದಾರೆ.

ಹೌದು ಹೊಸ ಚಿತ್ರ ನಿರ್ಮಾಣ ಮಾಡಬೇಕಿದೆ. ಈ ನಡುವೆ ಮದುವೆಗೆ ಎಲ್ಲಿ ಪುರುಸೊತ್ತು ? ರಾಧಿಕಾ ಹೇಳುವಂತೆ ಹೊಸ ನಿರ್ಮಾಣ ಚಿತ್ರಕ್ಕೆ ಲೊಕೇಶನ್ ನೋಡಲು ತುಂಬಾ ಸಮಯ ಬೇಕು. ಹೀಗಾಗಿ 20 ಚಿತ್ರಗಳನ್ನು ಬಿಟ್ಟಿದ್ದೇನೆ ಎಂದಿದ್ದಾರೆ. ನಿಮಗೆ ಈ ವಿಷಯ ಗೊತ್ತುಂಟಾ, ರಾಧಿಕಾ ಮಾಡಿದ ಚಿತ್ರ ಎಷ್ಟು ? 20 ಆಗಿರಬಹುದೇ ?

ಮುದ್ದಿನ ತಂಗಿ ಖ್ಯಾತಿಯ ರಾಧಿಕಾಗೆ ಮದುವೆ ಬಗ್ಗೆ ಕೇಳಿದರೆ ಹಿಂದಿನ ಅನುಬಂಧ ನೆನಪಾಗುತ್ತದೆ. ಈ ಹಿಂದೆ ಪಕ್ಕದಮನೆಯವ ಎಂದು ನನ್ನದು ಜನುಮಜನುಮದ ಅನುಬಂಧ ಹೇಳಿ ಬೇತಾಳನಂತೆ ಬೆನ್ನಿಗೆ ಬಿದ್ದು ಅಣುಬಂಧ ಸ್ಫೋಟಿಸಿ ರಾದ್ಧಾಂತ ಆದದ್ದು ಮರೆಯೋದು ಹೇಗೆ. ಹೀಗಾಗಿ ಈಗ ಮದುವೆ ಎಂದರೆ ಕನಸಲ್ಲೂ ಬೆಚ್ಚಿ ಬೀಳುತ್ತಾರೆ.

ಕಷ್ಟ ಮತ್ತು ಸುಖ ಅನುಭವಿಸಿದ ನಟೀಮಣಿಗೆ ಅಳುವುದು ಮತ್ತು ನಗುವುದು ಸಲೀಸಂತೆ. ಹೀಗಾಗಿ ಅಳುಮುಂಜಿ ಪಾತ್ರ ಮತ್ತು ಗ್ಲಾಮರಸ್ ಪಾತ್ರ ಕಷ್ಟವಾಗದೆ ಇಷ್ಟವಾಗಿದೆ ಎನ್ನುತ್ತಾರೆ ರಾಧಿಕಾ.

ಸುತ್ತಲೂ ಮುತ್ತಿಕೊಂಡ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ರಾಧಿಕಾ ಈ ಬಾರಿ ಹುಷಾರಿಲ್ಲ, ಮುಂದಿನ ಬಾರಿ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಟ್ರೈ ಮಾಡ್ತೇನೆ ಎಂದು ಪತ್ರಕರ್ತರಿಗೆ ಆಶ್ವಾಸನೆ ನೀಡಿ ಕೆಮ್ಮುತ್ತಾ ಮನೆಯತ್ತ ಮುಖ ಮಾಡಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada