»   » ‘ಕಾಂಟೆ’ ಚಿತ್ರನೋಡಿದರೆ ನಿಮ್ಮ ಕಾಲಡಿ ಹಾವು ಹರಿದಾಡುತ್ತವೆ

‘ಕಾಂಟೆ’ ಚಿತ್ರನೋಡಿದರೆ ನಿಮ್ಮ ಕಾಲಡಿ ಹಾವು ಹರಿದಾಡುತ್ತವೆ

Posted By: Staff
Subscribe to Filmibeat Kannada

ಜೈಪುರ: ಇದು ಶಿವ ಸೇನೆಯ ಹೊಸ ನಮೂನೆಯ ಪ್ರತಿಭಟನೆ. ಅಮಿತಾಬ್‌ ಬಚ್ಚನ್‌ ಹಾಗೂ ಸಂಜಯ್‌ ದತ್‌ ನಟಿಸಿರುವ 'ಕಾಂಟೆ" ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಲೇ ಬಂದಿರುವ ಶಿವಸೇನೆಯ ಪ್ರತಿಭಟನೆಯನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಚಿತ್ರದ ವಿರುದ್ಧ ಯಾವುದೇ ನಿಷೇಧಾಜ್ಞೆ ಹೊರಟಿಲ್ಲ. ಹಾಗಂತ ಶಿವಸೇನೆ ತನ್ನ ಪ್ರತಿಭಟನೆಯನ್ನು ಬಿಟ್ಟುಕೊಟ್ಟಿಲ್ಲ.

ಕಾಂಟೆ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಲ್ಲಿ ವಿಷಯುಕ್ತ ಹಾವುಗಳನ್ನು ಬಿಡುವ ಮೂಲಕ ಹೊಸ ನಮೂನೆಯ ಪ್ರತಿಭಟನೆಯನ್ನು ಶಿವಸೇನೆಯವರು ಹುಡುಕಿಕೊಂಡಿದ್ದಾರೆ. ಇದರಿಂದ ಜನರು ಥಿಯೇಟರಿಗೆ ಬರುವುದನ್ನು ತಪ್ಪಿಸಿದಂತಾಗುತ್ತದೆ ಎಂಬುದು ಸೇನೆಯ ಕಾರ್ಯಕರ್ತರ ನಂಬಿಕೆ.

ಕಾಂಟೆ ಚಿತ್ರವನ್ನು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವವರು ಪ್ರಾಯೋಜಿಸಿದ್ದಾರೆ. ಆದ್ದರಿಂದ ಆ ಚಿತ್ರವನ್ನು ನಿಷೇಧಿಸಬೇಕು ಎಂಬುದು ಶಿವಸೇನೆಯವರ ದೂರು. ಧರಣಿ, ಪ್ರತಿಭಟನೆ, ಪೋಸ್ಟರ್‌ಗಳನ್ನು ಸುಡುವುದು, ಘೕರಾವ್‌ ಮಾಡುವುದರಿಂದ ಯಾವುದೇ ಪ್ರಯೋಜನ ಕಾಣಿಸದೇ ಇರುವ ಹಿನ್ನೆಲೆಯಲ್ಲಿ ಈ ಹೊಸ ಉಪಾಯ ಕಂಡುಕೊಳ್ಳಲಾಗಿದೆ ಎಂದು ನಾನಕ್‌ ರಾಮ್‌ ಥವಾನಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಶಿವಸೇನೆ ಚಿತ್ರಮಂದಿರಗಳಲ್ಲಿ ಹಾವನ್ನು ಬಿಡುವುದಾಗಿ ಬೆದರಿಸಿರುವ ಬಗ್ಗೆ ಪೊಲೀಸಿನವರು ನೋಡಿಕೊಳ್ಳುತ್ತಾರೆ ಎಂದು ಶಿವಸೇನೆಯ ಸಿನೆಮಾದ ಮಾಧ್ಯಮ ವಕ್ತಾರರೊಬ್ಬರು ಹೇಳುತ್ತಾರೆ. ಶಿವಸೇನೆಯು ರಾಜಸ್ತಾನದ ರಾಜ್ಯಪಾಲರಿಗೆ ಮನವಿಯಾಂದನ್ನು ಸಲ್ಲಿಸಿ, ಈ ಸಿನೆಮಾಕ್ಕೂ ಭೂಗತ ಜಗತ್ತಿಗೂ ಸಂಬಂಧ ಇರುವುದರಿಂದ ಸಿನೆಮಾವನ್ನು ರಾಜಸ್ತಾನದಲ್ಲಿ ಪ್ರದರ್ಶಿಸುವುದೇ ಅಪರಾಧವಾಗುತ್ತದೆ ಎಂದು ಹೇಳಿದೆ.

English summary
Watch Kante, you will have snakes under your feet
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada