»   » ಎಲ್ಲಾ ಸತತ ಕಾಯಕದ ಫಲ. ಮೊನ್ನೆ ಅವರು ಮಾತಿಗೆ ಸಿಕ್ಕಿದ್ದರು

ಎಲ್ಲಾ ಸತತ ಕಾಯಕದ ಫಲ. ಮೊನ್ನೆ ಅವರು ಮಾತಿಗೆ ಸಿಕ್ಕಿದ್ದರು

By: ಮಣಿ
Subscribe to Filmibeat Kannada

ಬಿಡುವೇ ಇಲ್ಲ ಅಂತ ಹೇಳಿದ್ರೆ ಅದು ಶುದ್ಧ ಬೋಗಸ್‌ ಮಾತಾಗುತ್ತೆ. ನಂಗೆ ನಿಜಕ್ಕೂ ಬಿಡುವು ಅಗಾಗ್ಗೆ ಸಿಗ್ತಾ ಇರುತ್ತೆ. ಆವಾಗಲೆಲ್ಲ ನಾನು ನನ್ನಿಷ್ಟದ ಸಿನಿಮಾ ನೋಡ್ತೀನಿ. ಯಾವತ್ತೋ ಹೊಳೆದ ಕಥೆಗೆ ಒಂದು ಚೌಕಟ್ಟು ಹಾಕೋಕೆ ಸಾಧ್ಯವಾ ಅಂತ ಯೋಚಿಸ್ತೀನಿ. ಕಥೆ ಬಗ್ಗೆ ನನ್ನ ಸಿನಿಮಾ ಮಂದಿಯ ಜತೆಗೆ ಚರ್ಚಿಸ್ತೀನಿ. ಮನೇಲಿ ಮಕ್ಕಳ ಜತೆ ಮಗುವಾಗಿ ನಲೀತೀನಿ... ಹೀಗೆ ಹೇಳುತ್ತ ಹೇಳುತ್ತಲೇ ತಮ್ಮ ಟೈಂಪಾಸ್‌ ಪ್ರವರ ಆರಂಭಿಸಿದರು ಚಿತ್ರ ನಿರ್ದೇಶಕ ಶಿವಮಣಿ.

ಮೊದಲ ಚಿತ್ರ ರಾಜಕೀಯ, ಅದರ ಹಿಂದೆಯೇ ಬಂದ ಗೋಲಿಬಾರ್‌, ನಂತರದ ಶಿವಸೈನ್ಯ, ಸ್ವಾತಿ ಚಿತ್ರಗಳಿಂದ ಚಿತ್ರಪ್ರೇಮಿಗಳ ಮನಗೆದ್ದ ಶಿವಮಣಿ ಮುಂದುವರಿದು ಹೇಳಿದ ಮಾತಿದು: ನಾನು ಬಿಡುವು ಸಿಕ್ಕಾಗಲೆಲ್ಲ ಸಿನಿಮಾಕ್ಕೆ ಸಂಬಂಧಪಟ್ಟ ವಿಷಯ ಚರ್ಚಿಸ್ತೀನಿ. ಮುಖ್ಯವಾಗಿ ಸಮಾಜದ ವಿವಿಧ ವರ್ಗಗಳ ಜನರ ಮುಖದ ಭಾವನೆ, ಕ್ಷಣಕ್ಷಣಕ್ಕೆ ಬದಲಾಗುವ ಮುಖ ಚಹರೆ ಗಮನಿಸ್ತೀನಿ.

ಇವೆಲ್ಲ ಯಾಕೆ ಅಂದ್ರೆ ಒಬ್ಬ ಚಿತ್ರ ನಿರ್ದೇಶಕನಿಗೆ ಎಲ್ಲದರ ಅರಿವೂ ಇರಬೇಕಾಗುತ್ತೆ. ಒಬ್ಬ ಕೂಲಿ ಕೆಲಸಗಾರನ ಮುಖಭಾವ ಬೆಳಗ್ಗೆ ಹೇಗಿರುತ್ತೆ, ಮಧ್ಯಾಹ್ನ ಹೇಗಿರುತ್ತೆ ಅಂತ ಕ್ಯಾಮರಾ ಮುಂದೆಯೇ ಕೂತು ಕರಾರುವಾಕ್ಕಾಗಿ ಹೇಳಲು ಬರೊಲ್ಲವಲ್ಲ...

ಹಾಗಾಗಿ ನಾನು ಪ್ರತಿಯಾಬ್ಬರ ಮುಖಭಾವ ಪರಿಶೀಲಿಸ್ತಾ ಇರ್ತೀನಿ. ಪ್ರತಿಯಾಂದು ಯೋಚನೆಯ ಹಿಂದೆಯೂ ಅದರಿಂದ ಸಿನಿಮಾಕ್ಕೆ ಏನಾದ್ರೂ ಉಪಯೋಗ ಆಗುತ್ತಾ ಅಂತಲೇ ಯೋಚನೆ ಮಾಡ್ತೀನಿ.

ಈ ಮಧ್ಯೆ ಒಮ್ಮೊಮ್ಮೆ ಹಾದಿಬದಿ ಅಂಗಡೀಲಿ ಟೀ ಕುಡೀಬೇಕು ಅನ್ನಿಸಿಬಿಡುತ್ತೆ. ಆವಾಗೆಲ್ಲ ಬೇರೇನೂ ಯೋಚಿಸದೆ ಹಾದಿಬದಿಯ ಟೀ ಅಂಗಡಿಗೆ ನುಗ್ಗಿ ಟೀ ಕುಡೀತೀನಿ. ಮತ್ತೆ ಮನೆಗೆ ಹೋದ್ರೆ ಮಗಳು, ಸಿನಿಮಾ, ಆ ಕುರಿತ ಓದು ಇದ್ದೇ ಇದೆ. ಅದರ ಪಾಡಿಗದು ಟೈಂಪಾಸ್‌ ಆಗಿ ಬಿಡುತ್ತೆ...ಇಷ್ಟು ಹೇಳಿ ಮಾತು ನಿಲ್ಲಿಸಿದರು ಶಿವಮಣಿ.

English summary
Small chat with Director cum hero Shavamani
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada