»   » ಶೂಟಿಂಗ್‌ ವೇಳೆ ಸುದೀಪ್‌ಗೆ ಗಾಯ !

ಶೂಟಿಂಗ್‌ ವೇಳೆ ಸುದೀಪ್‌ಗೆ ಗಾಯ !

Posted By: Super
Subscribe to Filmibeat Kannada

ಬೆಂಗಳೂರು : ಚಿತ್ರನಟ ಸುದೀಪ್‌ ಚಿತ್ರೀಕರಣದಲ್ಲಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ಸೆ.29ರ ಬುಧವಾರ ನಡೆದಿದೆ. ಅವರ ಎಡಗಣ್ಣಿಗೆ ತೀವ್ರವಾದ ಪೆಟ್ಟಾಗಿದ್ದು, ವೈದ್ಯರು ಐದು ಹೊಲಿಗೆ ಹಾಕಿದ್ದಾರೆ.

ನಗರದ ಹೊರವಲಯದ ತಾವರೇಕೆರೆಯ ಕಾರ್ಖಾನೆಯಲ್ಲಿ ನಡೆಸಲಾಗುತ್ತಿದ್ದ ಸುದೀಪ್‌ ನಾಯಕತ್ವದ ಮಹಾರಾಜ ಚಿತ್ರದ ಹೊಡೆದಾಟದ ಸನ್ನಿವೇಶದ ಚಿತ್ರೀಕರಣದಲ್ಲಿ ಈ ದುರಂತ ಸಂಭವಿಸಿದೆ. ಗಾಯಗೊಂಡ ಸುದೀಪ್‌ರನ್ನು ಚಿಕಿತ್ಸೆಗಾಗಿ ಬಸವೇಶ್ವರನಗರದ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ತುರ್ತು ಚಿಕಿತ್ಸೆ ನೀಡಿ, ಆವರ ಎಡ ಭಾಗದ ಕಣ್ಣಿಗೆ ಐದು ಹೊಲಿಗೆ ಹಾಕಿದರು.

ತುಸು ಚೇತರಿಕೆ ಬಂದ ತಕ್ಷಣ ಗಾಯದ ನೋವನ್ನು ಮರೆತು, ಚಿತ್ರೀಕರಣದಲ್ಲಿ ಪಾಲ್ಗೊಂಡು ತಮ್ಮ ಕೆಲಸವನ್ನು ಪೂರ್ಣಗೊಳಿಸಿರುವುದು ಸುದೀಪ್‌ನ ಕ್ರಿಯಾಶೀಲತೆಗೆ ನಿದರ್ಶನ. ಹೆಚ್ಚಿನ ತೊಂದರೆಯಿಲ್ಲದೇ ಸುದೀಪ್‌ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಐದು ದಿನಗಳ ಕಾಲ ವಿಶ್ರಾಂತಿ ಪಡೆಯಲು ಅವರಿಗೆ ಸಲಹೆ ನೀಡಿದ್ದಾರೆ.

ಮಹಾರಾಜ ಚಿತ್ರದ ಅಂತಿಮ ದೃಶ್ಯದಲ್ಲಿ ಸುದೀಪ್‌ ಹಾಗೂ ನಟ ಅವಿನಾಶ್‌ ನಡುವೆ ಖಡ್ಗಗಳನ್ನು ಹಿಡಿದು ಹೊಡೆದಾಡುವ ಸನ್ನಿ ವೇಶವಿದೆ. ಈ ಸಂದರ್ಭಕ್ಕೆ ನಕಲಿ ಖಡ್ಗಗಳನ್ನು ಬಳಸಲು ಅವಿನಾಶ್‌ ನೀಡಿದ ಸಲಹೆಗೆ, ಚಿತ್ರದ ಸಾಹಸ ನಿರ್ದೇಶಕ ಕೌರವ ವೆಂಕಟೇಶ್‌ ಸಮ್ಮತಿಸಿದ್ದರು. ಆದರೆ ದೃಶ್ಯನೈಜವಾಗಿರಲಿ ಎಂದು ಸುದೀಪ್‌ ಅಸಲಿ ಖಡ್ಗಗಳನ್ನು ಬಳಸಲು ಸೂಚಿಸಿದ್ದರು. ಮೊದಲ ಶಾಟ್‌ ಚೆನ್ನಾಗಿ ಬಂದಿತ್ತು. ಎರಡನೇ ಶಾಟ್‌ನಲ್ಲಿ ಅವಿನಾಶ್‌ ಹಿಡಿದಿದ್ದ ಖಡ್ಗದ ಚೂಪು ತುದಿ, ಸುದೀಪ್‌ರ ಕಣ್ಣಿಗೆ ತಾಕಿದೆ. ಈ ಆಕಸ್ಮಿಕ ಘಟನೆಗೆ ನಟ ಅವಿನಾಶ್‌ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.(ಇನ್ಫೋ ವಾರ್ತೆ)

English summary
Sudeep injured in shooting

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada