»   » ಋತುಮಾಸ, ಇದು ಹಂಸ ವಿಲಾಸ...

ಋತುಮಾಸ, ಇದು ಹಂಸ ವಿಲಾಸ...

Posted By: Staff
Subscribe to Filmibeat Kannada
Hamsalekha's
ಬೆಂಗಳೂರು: ಡಿಸ್ಕೋ,ಪಾಪ್‌,ಲೈವ್‌ಬ್ಯಾಂಡ್‌ ಸಂಸ್ಕೃತಿಗೆ ಸಡ್ಡು ಹೊಡೆಯಲು ಚಿತ್ರಸಾಹಿತಿ ಹಂಸಲೇಖ ಟೊಂಕಕಟ್ಟಿ ನಿಂತಿದ್ದಾರೆ.
ನಾಡಿನ ಜಾನಪದ ಹಾಡು, ಕುಣಿತ, ಅಭಿನಯ ಹೀಗೆ ಅಚ್ಚ ಕನ್ನಡ ಸಂಸ್ಕೃತಿ ಬಿಂಬಿಸಲು ಹಂಸಲೇಖ ಮ್ಯೂಸಿಕ್‌ ಟ್ರಸ್ಟ್‌ ಸಜ್ಜಾಗಿದೆ. ನ.1 ರ ರಾಜ್ಯೋತ್ಸವದಂದು ನಗರದ ಸ್ವಾಮಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಋತು ಹಬ್ಬಕ್ಕೆ ಚಾಲನೆ ನೀಡುವುದಾಗಿ ಹಂಸಲೇಖ ತಿಳಿಸಿದ್ದಾರೆ.

ಸಾಹಿತ್ಯ, ಜಾನಪದ ಸಂಗೀತ, ಮಕ್ಕಳ ರಂಗಭೂಮಿ, ಮಹಿಳೆಯರ ಸಂಸ್ಕೃತಿ ಸಿರಿ, ನೈಜ ಹಾಸ್ಯದ ಅನಾವರಣ ಋತುಹಬ್ಬದ ವಿಶೇಷ. ನಾಡಿನ ಜಾನಪದ ಸಂಪತ್ತಿನ ಪ್ರದರ್ಶನಕ್ಕೆವಿವಿಧ ಭಾಗಗಳ ಕಲಾವಿದರನ್ನು ಬಳಸಿಕೊಳ್ಳ ಲಾಗುವುದು. ಜಾನಪದ ಸಾಹಿತ್ಯದಲ್ಲಿ ನಡೆದಷ್ಟು ಸಂಶೋಧನೆ, ಜಾನಪದ ಸಂಗೀತದಲ್ಲಿ ನಡೆದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಈ ಪ್ರಯತ್ನ ಹಂಸಲೇಖ ಮ್ಯೂಸಿಕ್‌ಟ್ರಸ್ಟ್‌ ನಿಂದ ನಡೆದಿದೆ. ಅದರ ಫಲಶ್ರುತಿಯನ್ನು ಋತು ಹಬ್ಬದಲ್ಲಿ ಅನುಭವಿಸಬಹುದು ಎಂದು ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.

ಋತು ಹಬ್ಬದ ವಿವರ: ಮಾಸಕ್ಕೊಂದು ಹೊಸ ಹೆಸರಿಟ್ಟು ಹಂಸಲೇಖ ಹಬ್ಬಕ್ಕೆ ಕಳೆತುಂಬಿದ್ದಾರೆ. ನವೆಂಬರ್‌ (ರಾಜ್ಯೋತ್ಸವ- ಕವಿಮಾಸ), ಡಿಸೆಂಬರ್‌(ಕ್ರಿಸ್‌ಮಸ್‌-ಕ್ರಿಸ್‌ಮಾಸ), ಜನವರಿ(ಗಣರಾಜ್ಯೋತ್ಸವ-ಪ್ರಜಾಮಾಸ), ಫೆಬ್ರವರಿ(ಶಿವ ರಾತ್ರಿ-ನಗುಮಾಸ), ಮಾರ್ಚಿ(ಯುಗಾದಿ-ಕವಿಮಾಸ), ಏಪ್ರಿಲ್‌(ಅಂಬೇಡ್ಕರ್‌ ಜಯಂತಿ-ಸಮತಾ ಮಾಸ), ಮೇ(ಬುದ್ಧ ಪೂರ್ಣಿಮೆ-ಬಸವಮಾಸ), ಜೂನ್‌(ದೇಸಿ ಮಾಸ), ಜುಲೈ(ಜಾನಪದಾಚರಣೆ ಅಂಗವಾಗಿ-ಬಿಸಿಲ್‌ ಮಾಸ), ಆಗಸ್ಟ್‌(ಸ್ವಾತಂತ್ರ್ಯದಿನಾಚರಣೆ-ಸ್ವತಂತ್ರ ಮಾಸ), ಸೆಪ್ಟಂಬರ್‌(ಗಣೇಶ ಚತುರ್ಥಿ-ವಿದ್ಯಾಮಾಸ), ಅಕ್ಟೋಬರ್‌(ಗಾಂಧಿ ಜಯಂತಿ-ಶಾಂತಿ ಮಾಸ) .

ಅರೆರೆ ಹಂಸಲೇಖಾ, ಸಿನಿಮಾ ಮಾಸವನ್ನೇ ಮರೆತುಬಿಟ್ಟಿದ್ದೀರಲ್ರೀ? ಇದು ಮೋಸ ಎನ್ನುತ್ತಿದ್ದಾರೆ ರವಿಚಂದ್ರನ್‌!

English summary
Noted musician of Kannada filmdom Hamsalekha's dream project 'Ruthu Habba' to be observed from November 1st of 2004

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada