»   » ಅಸಿನ್‌ ಎಂಬ ಅನಾಸಿನ್‌!

ಅಸಿನ್‌ ಎಂಬ ಅನಾಸಿನ್‌!

Subscribe to Filmibeat Kannada


ಸುದೀಪ್‌ ನಿರ್ದೇಶನದ ‘ಬಾವಾರ್ಚಿ’ ಚಿತ್ರದ ಕನ್ನಡ ಅವತರಣಿಕೆ ‘ನಂ.73, ಶಾಂತಿನಿವಾಸ’ದಲ್ಲಿ ಅಸಿನ್‌ ನಟಿಸುತ್ತಿದ್ದಾಳೆ. ಹಾಗಂತ ಸುದೀಪ್‌ ಅವರೇ ಘೋಷಿಸಿದ್ದಾರೆ. ಅಸಿನ್‌ ಒಂದು ಹಾಡಿನ ಪುಟ್ಟ ಸನ್ನಿವೇಶದಲ್ಲಿ ಬಂದು ಹೋಗುವ ಪಾತ್ರ ಮಾಡುತ್ತಿದ್ದಾಳಂತೆ.

ತೆಲುಗು, ತಮಿಳಿನಲ್ಲಿ ಅಸಿನ್‌ಗೆ ಮಹಾನ್‌ ಜನಪ್ರಿಯತೆ ಇತ್ತು. ಆಕೆ ಕೆಲವೊಮ್ಮೆ ತೃಷಾಳನ್ನು ಮೀರಿಸುವ ಯತ್ನ ಮಾಡಿದ್ದೂ ಉಂಟು. ತೃಷಾ ತೆಲುಗು ಚಿತ್ರಕ್ಕೆ ತೊಂಬತ್ತು ಲಕ್ಷ, ತಮಿಳಿಗೆ ಐವತ್ತು ಲಕ್ಷ ತೆಗೆದುಕೊಳ್ಳುತ್ತಿದ್ದ ದಿನಗಳಲ್ಲಿ ಆಕೆಗಿಂತ ಕಡಿಮೆ ಸಂಭಾವನೆಗೆ ಒಪ್ಪಿಕೊಂಡು ತೃಷಾಳ ಕೆಂಗಣ್ಣಿಗೆ ಗುರಿಯಾದಾಕೆ ಈಕೆ.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ‘ಮಜಾ’ ಚಿತ್ರಕ್ಕೆ ಅವರು ತೃಷಾಳನ್ನು ಆಯ್ಕೆ ಮಾಡಿದ್ದರು. ಆದರೆ ತೃಷಾ ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಳು. ಸಿಟ್ಟಿಗೆದ್ದ ರಾಕ್‌ಲೈನ್‌ ಅಸಿನ್‌ಗೆ ಅವಕಾಶ ಕೊಟ್ಟಿದ್ದರು. ವಿಜಯ್‌ ನಟಿಸಿದ ‘ಶಿವಕಾಶಿ’ ಚಿತ್ರಕ್ಕೂ ಇದೇ ಗತಿಯಾಯಿತು. ಇದೇ ಸಿಟ್ಟು ಇಟ್ಟುಕೊಂಡು ಇಬ್ಬರೂ ನಮ್ಮ ರಮ್ಯಾ ರಕ್ಷಿತಾ ಥರ ಕಿತ್ತಾಡಿದ್ದರು. ಆದರೆ ಈಗ ಅಸಿನ್‌ಗೆ ತೆಲುಗಿನಲ್ಲಿ ಅಂಥ ಬೇಡಿಕೆ ಇಲ್ಲ. ಅಲ್ಲಿ ಅವಳೀಗ ಅನಾಸಿನ್‌ ಪಾರ್ಟಿ!

ಇಂಥ ಹೊತ್ತಲ್ಲಿ ಅಸಿನ್‌ ಕನ್ನಡಕ್ಕೆ ಬಂದಿದ್ದಾಳೆ. ಭಾಷೆ ಕಲಿಯೋದರಲ್ಲಿ ಬಲುಜಾಣೆ ಅನ್ನಿಸಿಕೊಂಡಿರುವ ಅಸಿನ್‌ ಕನ್ನಡ ಕಲಿಯುತ್ತಾಳೋ ನೋಡಬೇಕು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌)

Please Wait while comments are loading...