»   » ಇಂದು ಹಿರಿಯ ನಟಿ ಜಯಶ್ರೀ ‘ಅಮ್ಮ’ನ ಅಂತ್ಯಕ್ರಿಯೆ

ಇಂದು ಹಿರಿಯ ನಟಿ ಜಯಶ್ರೀ ‘ಅಮ್ಮ’ನ ಅಂತ್ಯಕ್ರಿಯೆ

Posted By:
Subscribe to Filmibeat Kannada


ಬೆಂಗಳೂರು : ಕನ್ನಡದ ಹೆಸರಾಂತ ಹಿರಿಯ ನಟಿ ಎಂ.ಜಯಶ್ರೀ (77) ಅವರ ಅಂತ್ಯಕ್ರಿಯೆ, ಸೋಮವಾರ ನಗರದಲ್ಲಿ ನೆರವೇರಲಿದೆ.

ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನರಾದರು. ‘ಭಕ್ತ ಕುಂಬಾರ’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಸುಮಾರು ನಾಲ್ಕು ದಶಕಗಳ ಕಾಲ ಬಣ್ಣದ ಪ್ರಪಂಚದಲ್ಲಿ ಜಯಶ್ರೀ ತೊಡಗಿಸಿಕೊಂಡಿದ್ದರು. ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ನಾಗಕನ್ನಿಕಾ’. ಅಂದಿನ ತಮ್ಮ ಗ್ಲಾಮರಸ್‌ ಪಾತ್ರದಿಂದ ಪ್ರೇಕ್ಷಕರಲ್ಲಿ ಜಯಶ್ರೀ ಬೆರಗು ತಂದಿದ್ದರು. ನಟ ಡಾ.ರಾಜ್‌ ಕುಮಾರ್‌ ಅವರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು. 1970-71ರ ಸಾಲಿನಲ್ಲಿ ‘ಅಮರ ಭಾರತಿ’ ಚಿತ್ರಕ್ಕೆ ಶ್ರೇಷ್ಠ ಫೋಷಕ ನಟಿ ಪ್ರಶಸ್ತಿಯನ್ನು ಅವರು ಪಡೆದಿದ್ದರು.

ನಾಗರ ಹಾವು, ಚಕ್ರತೀರ್ಥ, ಜಗನ್ಮೋಹಿನಿ, ತಿಲೋತ್ತಮೆ, ಸೋದರಿ, ಮುತ್ತೈದೆ ಭಾಗ್ಯ, ಚಂದವಳ್ಳಿಯ ತೋಟ, ಜಗಜ್ಯೋತಿ ಬಸವೇಶ್ವರ, ಮಿಸ್‌ ಲೀಲಾವತಿ, ಸಾವಿರ ಮೆಟ್ಟಿಲು -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada