»   » ಅಂತರ್ಜಾಲದಲ್ಲಿ ‘ರಮ್ಯ’ಲೋಕ!

ಅಂತರ್ಜಾಲದಲ್ಲಿ ‘ರಮ್ಯ’ಲೋಕ!

Subscribe to Filmibeat Kannada

ರಮ್ಯ ಮಿರಮಿರ ಮಿಂಚುತ್ತಿದ್ದರು! ಕಪ್ಪು ಬಣ್ಣದ ಸೀರೆಯಲ್ಲಿ, ಹಾಲಿನಲ್ಲಿ ಮುಖ ತೊಳೆದವರಂತಿದ್ದರು! ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ತಾರಾಲೋಕ!

ರಮ್ಯ ಅಭಿಮಾನಿಗಳ ಸಂಘದ ಸದಸ್ಯರು, ತಮ್ಮ ನೆಚ್ಚಿನ ತಾರೆಯ ಹುಟ್ಟುಹಬ್ಬವನ್ನು ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಏರ್ಪಡಿಸಿದ್ದರು. ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಮಾಧ್ಯಮದವರು ಅಲ್ಲಿ ಕಿಕ್ಕಿರಿದಿದ್ದರು.

‘ಚಿತ್ರಲೋಕ’ ಪೋರ್ಟಲ್‌ ವಿನ್ಯಾಸಗೊಳಿಸಿರುವ ವೆಬ್‌ಸೈಟ್‌ www.ramyastar.comನ್ನು ಈ ಸಂದರ್ಭದಲ್ಲಿ ಖುಷಿಯಿಂದಲೇ ರಮ್ಯ ಲೋಕಾರ್ಪಣೆ ಮಾಡಿದರು. ರಮ್ಯಅವರ ಚಿತ್ರಬದುಕಿನ ಬಗ್ಗೆ ವೆಬ್‌ಸೈಟ್‌ನಲ್ಲಿ ಸಾಕಷ್ಟು ಮಾಹಿತಿಗಳಿವೆ. ಅಲ್ಲದೇ ಅಂದದ ಚಿತ್ರಗಳೂ ಉಂಟು.

ಸಮಾರಂಭದಲ್ಲಿ ಪಾರ್ವತಮ್ಮ ರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಇಂದ್ರಜಿತ್‌ ಲಂಕೇಶ್‌, ಗೌರಿ ಲಂಕೇಶ್‌, ವಿಜಯರಾಘವೇಂದ್ರ, ಮುರಳಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸೋದರ ಎಸ್‌.ಎಂ.ಶಂಕರ್‌, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ನಫೀಜಾ ಫಜಲ್‌ ಮತ್ತಿತರರು ಹಾಜರಿದ್ದರು.

ನಾಗತಿಹಳ್ಳಿ ಚಂದ್ರಶೇಖರ್‌ ಪರಿವಾರ ಸಮೇತ ಆಗಮಿಸಿದ್ದರು. ರಮ್ಯಳ ಗೆಳತಿ ರಕ್ಷಿತಾ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಆದರೆ ತಂಪು ಹೊತ್ತಿನಲ್ಲಿ ಸುಂಟರಗಾಳಿ ನೆನಪು ಯಾರಿಗೂ ಬಂದಿರಲಿಲ್ಲ!

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada