»   » ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಚ್ಚನ್‌, ಐಶ್‌?

ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಚ್ಚನ್‌, ಐಶ್‌?

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 4, 2004ರಂದು ತುಮಕೂರಿನಲ್ಲಿ ನಡೆಯಲಿದ್ದು, ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಮತ್ತು ಸುರಸುಂದರಾಂಗಿ ಐಶ್ವರ್ಯಾ ರೈ ಮುಖ್ಯ ಅತಿಥಿಗಳಾಗಿ ಆಗಮಿಸುವ ನಿರೀಕ್ಷೆಯಿದೆ.

‘ಕ್ಯೋಂ ಹೋಗಯಾನಾ’ ಎಂಬ ಹಿಂದಿ ಚಿತ್ರದ ಶೂಟಿಂಗಲ್ಲಿ ಬ್ಯುಸಿಯಾಗಿರುವ ಉಭಯ ತಾರೆಗಳು ಮಡಿಕೇರಿ ಸುತ್ತಿಕೊಂಡು ಇದೀಗ ಕುಂದಾಪುರದಲ್ಲಿದ್ದಾರೆ. ಇವರಿಬ್ಬರ ಒಪ್ಪಿಗೆಗೆ ಕರ್ನಾಟಕ ಸರ್ಕಾರ ಕಾಯುತ್ತಿದ್ದು, ಅದು ಸಿಕ್ಕ ತಕ್ಷಣವೇ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದೆ.

ಅಮಿತಾಬ್‌ ಹಾಗೂ ಐಶ್ವರ್ಯ ಪೋಲಿಯೋ ಜಾಗೃತಿ ಕಾರ್ಯಕ್ರಮದ ಮಾಡೆಲ್‌ಗಳೂ ಹೌದು. ಇತ್ತೀಚೆಗೆ ಟೀವಿಯಲ್ಲಿ ಜೋರಾಗಿ ಕಾಣಿಸಿಕೊಳ್ಳುತ್ತಿರುವ ಬಚ್ಚನ್‌ ಹಾಗೂ ಐಶ್ವರ್ಯಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಯಾಕೆಂದರೆ, ಅವತ್ತು ಪಲ್ಸ್‌ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಯಾವುದಾದರೂ ಹಳ್ಳಿಯಲ್ಲಿ ಇಬ್ಬರೂ ತಾರೆಯರು ಮಗುವಿನ ಬಾಯಿಗೆ ಲಸಿಕೆ ಹಾಕುವ ಸಂಭವವಿದೆ. ಅದು ತುಮಕೂರು ಜಿಲ್ಲೆಯ ಯಾವುದಾದರೂ ಹಳ್ಳಿಯೇ ಯಾಕಾಗಬಾರದು ಅನ್ನುತ್ತಿದೆ ಸರ್ಕಾರ.

ಬಚ್ಚನ್‌ ಹಾಗೂ ಐಶ್‌ ಕಾರ್ಯಕ್ರಮಕ್ಕೆ ಒಪ್ಪಿದಲ್ಲಿ, ಬರುವ ಭಾನುವಾರ ತುಮಕೂರು ರಂಗೋರಂಗು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada