»   » ಸುನಾಮಿ: ರಾಜ್‌-ವಿಷ್ಣು ನೆರವು

ಸುನಾಮಿ: ರಾಜ್‌-ವಿಷ್ಣು ನೆರವು

Posted By: Super
Subscribe to Filmibeat Kannada

ಬೆಂಗಳೂರು : ಸುನಾಮಿ ಸಂತ್ರಸ್ತರ ನೆರವಿಗಾಗಿ ರಾಜ್ಯವೂ ಸೇರಿದಂತೆ ದೇಶದ ವಿವಿಧೆಡೆಗಳಿಂದ ನೆರವಿನ ಮಹಾಪೂರ ಹರಿದುಬರುತ್ತಿದ್ದು , ಕನ್ನಡ ಚಿತ್ರೋದ್ಯಮ ಕೂಡ ಸಂತ್ರಸ್ತರ ನೆರವಿಗೆ ಕೈಜೋಡಿಸಿದೆ.

ವರನಟ ಡಾ.ರಾಜ್‌ಕುಮಾರ್‌ 5 ಲಕ್ಷ ರುಪಾಯಿಗಳ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಮತ್ತೊಬ್ಬ ಖ್ಯಾತ ನಟ ವಿಷ್ಣುವರ್ಧನ್‌ ಸ್ನೇಹಲೋಕ ಬಳಗದ ಪರವಾಗಿ 1 ಲಕ್ಷ ರುಪಾಯಿಗಳ ನೆರವನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹದ ನಿಧಿಗೆ ನೀಡಿದ್ದಾರೆ.

ಬೆಂಗಳೂರಿನ ಟೆನ್ನಿಸ್‌ ಕ್ಲಬ್‌ನಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಡಿ.29ರ ಬುಧವಾರ ರಾಜ್‌ ದಂಪತಿಗಳು 5 ಲಕ್ಷ ರುಪಾಯಿಗಳ ಚೆಕ್‌ ನೀಡಿದರು. ವಿಷ್ಣುವರ್ಧನ್‌ ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ನ ಅಜಯ್‌ ಮೆನನ್‌ ಅವರಿಗೆ 1 ಲಕ್ಷ ರುಪಾಯಿ ಚೆಕ್‌ ನೀಡಿದರು. ಇದೇ ಸಂದರ್ಭದಲ್ಲಿ ಅಮೆರಿಕಾ ನಿವಾಸಿ ನಟರಾಜ್‌ 5 ಲಕ್ಷ ರುಪಾಯಿಗಳ ನೆರವು ನೀಡಿದರು.

ರಾಜ್ಯದ ಟೆಲಿವಿಷನ್‌ ಕಲಾವಿದರು ತಂತ್ರಜ್ಞರು ಸುನಾಮಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸುತ್ತಿದೆ. ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ದೇಣಿಗೆ ಸಂಗ್ರಹಿಸಲು ಕಿರುತೆರೆ ತಂತ್ರಜ್ಞರು-ಕಲಾವಿದರು ಉದ್ದೇಶಿಸಿದ್ದಾರೆ.(ಇನ್ಫೋ ವಾರ್ತೆ)

English summary
Dr. Rajkumar donates Rs. 5 lakhs to Tsunami Relief Fund

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada