»   » 2005 : ಟಾಪ್‌-5 ಕನ್ನಡ ಚಿತ್ರಗಳು

2005 : ಟಾಪ್‌-5 ಕನ್ನಡ ಚಿತ್ರಗಳು

Posted By:
Subscribe to Filmibeat Kannada

2005 ಇತಿಹಾಸದ ಗರ್ಭ ಸೇರುತ್ತಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ 2005 ಸುಗ್ಗಿಯ ವರ್ಷ. ವರ್ಷದ ಬಹುತೇಕ ಚಿತ್ರಗಳು ನಿರ್ಮಾಪಕರ ಜೇಬು ತುಂಬಿಸಿವೆ. ಗಳಿಕೆಯ ದೃಷ್ಟಿಯಿಂದ ನೋಡುವುದಾದರೆ ‘ಜೋಗಿ’ಯ ಸಾಧನೆ ನಿಜಕ್ಕೂ ಜೋರು.

2005ರ ಟಾಪ್‌-5 ಚಿತ್ರಗಳ ವಿವರ :

1. ಜೋಗಿ : ಶಿವರಾಜ್‌ಕುಮಾರ್‌, ಜೆನಿಫರ್‌, ಅರುಂಧತಿನಾಗ್‌ ತಾರಾಗಣದ ಈ ಚಿತ್ರದ ನಿರ್ದೇಶಕ ಪ್ರೇಮ್‌. ಗುರುಕಿರಣ್‌ ಸಂಗೀತದ ಮೋಡಿ ಚಿತ್ರದ ಗೆಲುವಿಗೆ ಪ್ರಮುಖ ಕಾರಣ. ಇಪ್ಪತ್ತು ಕೋಟಿಗೂ ಅಧಿಕ ಲಾಭ ಮಾಡಿರುವ ಈ ಚಿತ್ರ, ಯಶಸ್ಸಿನ ಯಾತ್ರೆಯನ್ನು ಮುನ್ನಡೆಸಿದೆ.

2. ಆಕಾಶ್‌ : ಮಹೇಶ್‌ ಬಾಬು ನಿರ್ದೇಶನ, ಆರ್‌.ಪಿ.ಪಟ್ನಾಯಕ್‌ ಸಂಗೀತ ನಿರ್ದೇಶನದ ಈ ಚಿತ್ರದ ಮೂಲಕ ಪುನೀತ್‌, ರಮ್ಯ ಮಿಂಚಿದ್ದರು. ಇಪ್ಪತ್ತೆೈದು ವಾರಗಳ ಪ್ರದರ್ಶನ ಕಂಡ ಈ ಚಿತ್ರದ ಒಟ್ಟು ಲಾಭ ಎಂಟು ಕೋಟಿ ರೂಪಾಯಿ.

3. ಅಯ್ಯ : ಮಚ್ಚಿನ ನಾಯಕ ದರ್ಶನ್‌, ಸುಂಟರಗಾಳಿ ರಕ್ಷಿತಾ ಅಭಿನಯದ ಈ ಚಿತ್ರದ ನಿರ್ದೇಶಕ ಓಂಪ್ರಕಾಶ್‌. ನೂರು ದಿನಗಳ ಪ್ರದರ್ಶನ ಕಂಡ ಈ ಚಿತ್ರದ ಲಾಭ ಐದು ಕೋಟಿ ರೂಪಾಯಿ.

4. ಅಮೃತಧಾರೆ : ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನ ಮತ್ತು ನಿರ್ಮಾಣದ ಈ ಚಿತ್ರ ಶತದಿನದ ಸಂಭ್ರಮ ಕಂಡಿದೆ. ಧ್ಯಾನ್‌, ರಮ್ಯ ಅಭಿನಯದ ಈ ಚಿತ್ರ ಗಳಿಸಿದ ಲಾಭ ಎರಡು ಕೋಟಿ ರೂಪಾಯಿ.

5. ಗೌರಮ್ಮ : ಉಪೇಂದ್ರ, ರಮ್ಯ ಅಭಿನಯದ ಈ ಚಿತ್ರ ನೂರು ದಿನಗಳ ಪ್ರದರ್ಶನ ಕಂಡಿದೆ. ನಾಗಣ್ಣ ನಿರ್ದೇಶನದ ಈ ಚಿತ್ರ ಎರಡು ಕೋಟಿ ಲಾಭ ಗಳಿಸಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada