»   » ಶಿವಣ್ಣ30: ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯಿಂದ ಕೊಟ್ಟ ಗಿಫ್ಟೇನು?

ಶಿವಣ್ಣ30: ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯಿಂದ ಕೊಟ್ಟ ಗಿಫ್ಟೇನು?

Posted By:
Subscribe to Filmibeat Kannada

ಚಂದನವನದ ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ, ಸ್ಟೈಲಿಷ್ ಸ್ಟಾರ್, ಎಲ್ಲರ ಅಚ್ಚು-ಮೆಚ್ಚಿನ ಶಿವಣ್ಣ ಅಲಿಯಾಸ್ ಶಿವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಬರೋಬ್ಬರಿ 30 ವರ್ಷವನ್ನು ಪೂರೈಸಿದ್ದಾರೆ. ಫೆಬ್ರವರಿ 19ಕ್ಕೆ ಶಿವಣ್ಣನ ಸಿನಿಪಯಣದ 30 ವರ್ಷ ಕಂಪ್ಲೀಟ್ ಆಗಿದೆ.

ಮೊಟ್ಟ ಮೊದಲ ಬಾರಿಗೆ 'ಆನಂದ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ಶಿವಣ್ಣ ಆನಂತರ ನಟಿಸಿದ 'ರಥಸಪ್ತಮಿ', ಮತ್ತು 'ಮನಮೆಚ್ಚಿದ ಹುಡುಗಿ' ಎರಡು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರಿಂದ ಆಗಿನ ಕಾಲದಲ್ಲೇ ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]

ತದನಂತರ ಹಿಂತಿರುಗಿ ನೋಡದ ಶಿವಣ್ಣ ಅವರು ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಸಿನಿಪ್ರಿಯರಿಗೆ ಕೊಡುತ್ತಾ ಬಂದರು. ಇದರಿಂದ ಶಿವಣ್ಣ ಅವರಿಗೆ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡರು.

ಸದಾ ಸರಳತೆಯನ್ನು ಬಯಸುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ. ದೊಡ್ಮನೆ ಹುಡುಗನಾದರೂ ಸರಳತೆಯನ್ನು ತಮ್ಮ ಜೀವನದಲ್ಲಿ ತುಂಬಾನೇ ಮೈಗೂಡಿಸಿಕೊಂಡಿದ್ದಾರೆ.[ಶಿವಣ್ಣನ ಮೊದಲ ಚಿತ್ರ 'ಆನಂದ್' ಶೂಟಿಂಗ್ ಅನುಭವ ಹೇಗಿತ್ತು ಗೊತ್ತಾ?]

ಇಂತಹ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಕನ್ನಡ ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ಸವಿನೆನಪಿಗಾಗಿ ಶಾಲು ಹೊದಿಸಿ ಸನ್ಮಾನ ಮಾಡಿ ನೆನಪಿನ ಕಾಣಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಕಾಣಿಕೆ ಏನು ಎಂಬುದನ್ನು ನೀವು ನೋಡಬೇಕೆ ಹಾಗಾದ್ರೆ ಸ್ಲೈಡ್ಸ್ ಕ್ಲಿಕ್ ಮಾಡಿ...(ಎಲ್ಲಾ ಚಿತ್ರಕೃಪೆ: ಫೇಸ್ ಬುಕ್).

ಬೆಳ್ಳಿಯ ಕಡಗ ಉಡುಗೊರೆ

ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಭರ್ತಿ 30 ವರ್ಷ ಪೂರೈಸಿ ಇದೀಗ 31ನೇ ವರ್ಷಕ್ಕೆ ಪಾದಾರ್ಪಣೆ ಮಾಡಲು ಅಣಿಯಾಗುತ್ತಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ, ಶಾಲು ಹೊದೆಸಿ, ಪೇಟ ತೊಡಿಸಿ, ಕೈಗೆ ಬೆಳ್ಳಿಯ ಕಡಗ ತೊಡಿಸಿದ್ದಾರೆ. ಅಭಿಮಾನಿಗಳ ಈ ಮುಗ್ದ ಅಭಿಮಾನವನ್ನು ನೋಡಿದ ಶಿವಣ್ಣ ಮೂಕವಿಸ್ಮಿತರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಗೀತಾಕ್ಕ

ಅಭಿಮಾನಿಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭಕ್ಕೆ ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾರಾ ಗೋವಿಂದು ಮತ್ತು ಶಿವಣ್ಣ ಅವರ ಆಪ್ತ 'ಭಜರಂಗಿ', 'ವಜ್ರಕಾಯ' ನಿರ್ದೇಶಕ ಕಮ್ ನೃತ್ಯ ನಿರ್ದೇಶಕ ಎ.ಹರ್ಷ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಕಳೆ ತಂದಿದ್ದರು.

ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಬಿಡುಗಡೆ ಆಗುತ್ತಿದ್ದ ಸಂದರ್ಭದಲ್ಲಿ 'ಶಿವಲಿಂಗ' ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಇದೀಗ #30yearsofshiism ಎಂದು ಟ್ವಿಟ್ಟರ್ ನಲ್ಲಿ ಶಿವಣ್ಣ 30 ವರ್ಷ ಟಾಪ್ ಟ್ರೆಂಡಿಂಗ್ ಆಗಿದೆ.

3 ಬ್ಲಾಕ್ ಬಸ್ಟರ್ ಹಿಟ್

ಅಂದಿನ ಕಾಲದಲ್ಲಿ ಹಿಟ್ ಸಿನಿಮಾ ಕೊಟ್ಟು ಹ್ಯಾಟ್ರಿಕ್ ಹೀರೋ ಎನಿಸಿಕೊಂಡ ಶಿವಣ್ಣ ಅವರು ಇಂದು ಕೂಡ ಮೂರು ಹಿಟ್ ಸಿನಿಮಾಗಳಾದ 'ವಜ್ರಕಾಯ', 'ಕಿಲ್ಲಿಂಗ್ ವೀರಪ್ಪನ್' ಮತ್ತು 'ಶಿವಲಿಂಗ' ಸಿನಿಮಾವನ್ನು ಅಭಿಮಾನಿಗಳಿಗೆ ನೀಡಿ ಮತ್ತೆ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿದ್ದಾರೆ.

ಸರಳ ಶಿವಣ್ಣ

ಶಿವಣ್ಣ ಅವರು ತುಂಬಾ ಸರಳ ಮನುಷ್ಯ ಮತ್ತು ತುಂಬಾನೇ ಸಹಾಯ ಜೀವಿ ಎನ್ನೋದಕ್ಕೆ ಈ ಚಿತ್ರವೇ ಸಾಕ್ಷಿ. ಜನಗಳ ಮಧ್ಯೆ ಶಿವಣ್ಣ ಅವರು ತಾವೊಬ್ಬ ದೊಡ್ಡ ಸ್ಟಾರ್ ಎಂಬುದನ್ನು ಮರೆತು ಬಿಡುತ್ತಾರೆ.

10 ಸಿನಿಮಾ ಇಂಡಸ್ಟ್ರಿ ಹಿಟ್

ಶಿವಣ್ಣ ಅವರ 10 ಸಿನಿಮಾಗಳು ಸುಮಾರು 25 ವಾರಗಳಿಗಿಂತಲೂ ಮೇಲ್ಪಟ್ಟು ಚಿತ್ರಮಂದಿರಗಳಲ್ಲಿ ಓಡಿದ್ದು, ಇಂದಿಗೂ ಆ ಸ್ಪೆಷಲ್ ಸಿನಿಮಾಗಳು ಇತಿಹಾಸದ ಪುಟ ಸೇರಿವೆ. (ಚಿತ್ರಕೃಪೆ: ಫೇಸ್ ಬುಕ್)

ಯಂಗ್ ಅಂಡ್ ಎನರ್ಜಿಟಿಕ್ ಬಾಯ್

ಚಿತ್ರರಂಗದಲ್ಲಿ ಇಂದಿಗೂ ಚಿರಯುವಕರಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಯಂಗ್ ಅಂಡ್ ಎನರ್ಜಿಟಿಕ್ ನಟ ಅಂದರೆ ಅದು ಶಿವರಾಜ್ ಕುಮಾರ್ ಅವರು. ನೃತ್ಯದಲ್ಲಂತೂ ಶಿವಣ್ಣನಿಗೆ ಶಿವಣ್ಣನೇ ಸಾಟಿ. (ಚಿತ್ರಕೃಪೆ: ಚಂದನ್ ಫೊಟೋಗ್ರಫಿ)

ಅಪ್ಪಾಜಿಯ ಹೋಲಿಕೆ

ಆವಾಗ ಅಪ್ಪಾಜಿ (ವರನಟ ಡಾ.ರಾಜ್ ಕುಮಾರ್) ಹೇಗಿದ್ದರೋ ಹಾಗೆಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದ್ದು, ಶಿವಣ್ಣನ ನೇಚರ್ ಎಲ್ಲಾ ಪಕ್ಕಾ ಅಪ್ಪಾಜಿ ಅವರನ್ನು ಹೋಲುತ್ತದೆ. ಒಟ್ನಲ್ಲಿ ಅಪ್ಪಾಜಿಯ ಮುದ್ದಿನ ಮಗ ಡಾ.ಶಿವಣ್ಣ.

English summary
Hatrick Hero Shivarajkumar, eldest son of Dr Rajkumar completes 30 years in Kannada film industry. Kannada Actor Shiva Rajkumar fans gifts Silver Bangle.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada