ನಿರೀಕ್ಷೆಯ ಗೋಪುರ ಗೋಲ್ಡನ್ ಸ್ಟಾರ್ ಮದುವೆ ಮನೆ

ಆದರೆ ಈಗ ಕಾಲ ಹಾಗಿಲ್ಲ. ಗಣೇಶ್ ಕೈನಲ್ಲಿ ಸಾಕಷ್ಟು ಚಿತ್ರವಿದೆ. ಇದೀಗ ನವೆಂಬರ್ 4ರಂದು ಗಣೇಶ್ ಅಭಿನಯದ 'ಮದುವೆ ಮನೆ' ಬಿಡುಗಡೆ ಆಗಲಿದೆ. ಮತ್ತೊಂದು ಚಿತ್ರ 'ಶೈಲೂ' ಶೂಟಿಂಗ್ ಮುಗಿಸಿ ಬಿಡುಗಡೆಗೆ ಕಾಯುತ್ತಿದೆ. ಇದೀಗ ರೋಮಿಯೋ ಚಿತ್ರದ ಚಿತ್ರೀಕರಣದಲ್ಲಿ ಗಣೇಶ್ ಬ್ಯುಸಿಯಾಗಿದ್ದಾರೆ. ಅಲ್ಲಿಗೆ ಗಣೇಶ್ ಗೆ ಎಲ್ಲವೂ ಕೂಲ್ ಕೂಲ್.
"ನನ್ನ ಯಾವ ಚಿತ್ರವನ್ನೂ ನಾನು ನನ್ನ ಆಪ್ತರಿಗೆ, ಹಿತೈಷಿಗಳಿಗೆ ನೋಡಿ ಎಂದು ಹೇಳಿದವನಲ್ಲ. ಆದರೆ ಈಗ ಬಿಡುಗಡೆ ಆಗಲಿರುವ 'ಮದುವೆ ಮನೆ' ನೋಡಿ ಎಂದು ಹೇಳುತ್ತಿದ್ದೇನೆ. ಕಾರಣ ನನ್ನ ವೃತ್ತಿಜೀವನದಲ್ಲಿ ಇದು ವಿಭಿನ್ನ ಹಾಗೂ ಅಮೋಘವಾದ ಚಿತ್ರ. ಸಾಕಷ್ಟು ಪ್ರತಿಭೆ ಹಾಗೂ ಶ್ರಮವನ್ನು ಧಾರೆ ಎರೆದಿದ್ದೇನೆ" ಎಂದಿದ್ದಾರೆ.
ಮೊದಲೇ ನಿರೀಕ್ಷೆಯ ಮಹಾಪೂರವಾಗಿರುವ 'ಮದುವೆ ಮನೆ' ಚಿತ್ರ, ಗಣೇಶ್ ಮಾತಿನಿಂದ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಗಣೇಶ್ ಅಭಿಮಾನಿಗಳಿಗೆ ಕಾತರ ಜಾಸ್ತಿಯಾಗಿ ನವೆಂಬರ್ 4 ಕ್ಕೆ ಕಾಯುವಂತಾಗಿದೆ. ಈ ಮದುವೆ ಮನೆ, ಮತ್ತೊಂದು ಮುಂಗಾರು ಮಳೆ ಆಗುವ ಲಕ್ಷಣ ಸ್ಪಷ್ಟವಾಗಿ ಗೋಚರಿಸಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











