For Quick Alerts
  ALLOW NOTIFICATIONS  
  For Daily Alerts

  ಮತ್ತೆ ಗನ್ ಹಿಡಿದು 'ಗೋಡ್ಸೆ' ಆದ ಹರೀಶ್ ರಾಜ್

  |

  ಗನ್ ಚಿತ್ರ ಹಾಗೂ ಆತ್ಮಹತ್ಯೆ ಪ್ರಯತ್ನದ ಮೂಲಕ ಸಾಕಷ್ಟು ಸುದ್ದಿಯಾಗಿರುವ ನಟ ಹರೀಶ್ ರಾಜ್, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ ಅವರೀಗ ನಾಥೂರಾಮ್ ಗೋಡ್ಸೆ. ಅಂದರೆ, ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕೂರ್ಮಾವತಾರ' ಚಿತ್ರದಲ್ಲಿ ಅವರು ಗೋಡ್ಸೆ ಪಾತ್ರ ಮಾಡಿದ್ದಾರೆ.

  ಗನ್ ಗಲಾಟೆಯ ನಂತರ ಈ ಪಾತ್ರ ಹರೀಶ್ ಪಾಲಾಗಿದ್ದಲ್ಲ, ಅದಕ್ಕೂ ಮೊದಲೇ ಕಥೆ ಹೆಣೆಯುವಾಗಲೇ ಕಾಸರವಳ್ಳಿ ಮನಸ್ಸಿನಲ್ಲಿ ಹರೀಶ್ ರಾಜ್ ಇದ್ದರೆಂಬ ಸ್ಪಷ್ಟೀಕರಣ ಸಿಕ್ಕಿದೆ. ಆದರೆ ಗನ್ ಗಲಾಟೆಯ ನಂತರ ಹರೀಶ್ ರಾಜ್ ರನ್ನು ಹುಡುಕಿಕೊಂಡು ಸಾಕಷ್ಟು ವಿಭಿನ್ನ ಪಾತ್ರಗಳು ಬರುತ್ತಿವೆಯಂತೆ.

  ಶ್ರೀ ಕ್ಷೇತ್ರ ಆದಿಚುಂಚನಗಿರಿ ಚಿತ್ರದಲ್ಲಿ ನಾರದನ ಪಾತ್ರ ಮಾಡಿದ್ದಲ್ಲದೇ ನಿಗೂಢ, ಗೋವಿಂದಾಯ ನಮಃ ಹಾಗೂ ಚಾಲೆಂಜ್ ಚಿತ್ರಗಳಲ್ಲಿ ಕೂಡ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೇವಲ ಹಿರಿತೆರೆಯಲ್ಲಿ ಅಲ್ಲದೇ ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಿರುವ ಹರೀಶ್, ಸದ್ಯದಲ್ಲೇ ಕಸ್ತೂರಿವಾಹಿನಿಯ 'ಜಾಕ್ ಪಟ್' ರಿಯಾಲಿಟಿ ಶೋ ಕೂಡ ನಡೆಸಿಕೊಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actor Harish Raj is acting in movie 'Koormavathara' He performes Nathuram Godse character. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X