ಕ್ರೇಜಿಸ್ಟಾರ್ ರವಿಚಂದ್ರನ್ ಎಲ್ಲಿ ಹೋದರು?
ಈ ಬಾರಿ ಕ್ರೇಜಿಸ್ಟಾರ್ ರವಿಚಂದ್ರ ತಮ್ಮ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟು ಮಾಡಿದ್ದಾರೆ. ಅವರ ಹುಟ್ಟುಹಬ್ಬ ಎಂದು ಅವರ ಅಭಿಮಾನಿಗಳು ಡಾ.ರಾಜ್ ಕುಮಾರ್ ರಸ್ತೆಯ ಅವರ ಮನೆಗೆ ಹೋದರೆ ಅವರ ಸುಳಿವಿಲ್ಲ. ಎಲ್ಲಿ ಹೋದರು ರವಿಚಂದ್ರನ್.
ಈ ಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಮೊದಲೆ ರವಿಚಂದ್ರನ್ ತನ್ನ ಅಭಿಮಾನಿಗಳಿಗೆ ತಿಳಿಸಿದ್ದರು. ಅವರ ಮಹತ್ವಾಕಾಂಕ್ಷಿ ಚಿತ್ರ 'ಮಂಜಿನಹನಿ' ಚಿತ್ರ ಬಿಡುಗಡೆ ದಿನವೇ ನನ್ನ ಹುಟ್ಟುಹಬ್ಬ ಎಂದಿದ್ದರು. ದಯವಿಟ್ಟು ಕೇಕು, ಹೂವು, ಹಣ್ಣು ತರಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು.
ಅಭಿಮಾನಿಗಳೇನೋ ರವಿ ಮನೆ ಮುಂದೆ ಜಮಾಯಿಸಿದರು. ಆದರೆ ಅವರು ಮಾತ್ರ ಕಾರ್ಯನಿಮಿತ್ತ ಗೋವಾದಲ್ಲಿದ್ದರು. 'ಮಂಜಿನ ಹನಿ' ಬಿಡುಗಡೆ ದಿನ ಡಬ್ಬಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ರವಿ ಕಾತುರದಿಂದಿದ್ದಾರೆ.
ರವಿಚಂದ್ರನ್ ಅವರ ಆತ್ಮೀಯ ಗೆಳೆಯ ಹಂಸಲೇಖ ಅವರು ಹುಟ್ಟುಹಬ್ಬ ಶುಭಾಶಯ ಕೋರಿದ್ದಾರೆ. ಹಂಸಲೇಖ ಅವರಿಗೆ ರವಿಚಂದ್ರನ್ ಯಾವಾಗಲು ಕನಸುಗಾರ. ಸದಾ ಕನಸಿನಲ್ಲಿ ಮುಳುಗಿರುವ ರವಿ ತಮ್ಮ ಚಿತ್ರದ ಮೂಲಕ ಏನಾದರೂ ಕೊಡಲಿ ಎಂದಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











