ಸೆಂಚುರಿ ಸ್ಟಾರ್ ಶಿವಣ್ಣನ 104ನೇ ಚಿತ್ರ ಸಂಕ್ರಾಂತಿಗೆ

ಶಿವಣ್ಣ ನೂರನೇ ಚಿತ್ರ ಮುಗಿಸಿ ಸೆಂಚರಿ ಸ್ಟಾರ್ ಅನ್ನಿಸಿಕೊಂಡಿದ್ದು ಈಗ ಇತಿಹಾಸ. ಈಗ 103 ಚಿತ್ರಗಳ ಸರದಾರ ಆಗಿರುವ ಶಿವರಾಜ್ ಕುಮಾರ್ ಅವರ 104 ನೇ ಚಿತ್ರ ಯಾವುದಿರಬಹುದೆಂಬುದು ಗಾಂಧಿನಗರವನ್ನೂ ಮೀರಿ ಚರ್ಚೆಯ ವಿಷಯವಾಗಿತ್ತು. ಇದೀಗ ಆ ಚಿತ್ರ 'ಬ್ರಹ್ಮಾಸ್ಮಿ' ಎಂಬ ರಹಸ್ಯ ಬಯಲಾಗಿದೆ.

ಶಿವಣ್ಣನ ಬ್ರಹ್ಮಾಸ್ಮಿಗೆ ನಿರ್ದೇಶಕರು ಕಿರಣ್. ಇದು ಅವರ ಮೊದಲ ಚಿತ್ರ. ಮಕರ ಸಂಕ್ರಾಂತಿಯಂದು ಮುಹೂರ್ತ. ನಾಯಕಿ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ. ಈಗಾಗಲೇ ಅನುಷ್ಕಾ ಜೊತೆ ಮಾತುಕತೆ ನಡೆದಿದ್ದು ಫೋಟೋ ಸೆಷನ್ ಕೂಡ ಮುಗಿದಿದೆ. ಅನುಷ್ಕಾ ಬರುತ್ತಾಳೆಂದರೆ ನಿರೀಕ್ಷೆ ಸಹಜವೇ.

ಈ ಹಿಂದೆ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರ ನಿರ್ಮಿಸಿದ್ದ ವಿಜಯ್ ಕುಮಾರ್ ಈ ಬ್ರಹ್ಮಾಸ್ಮಿಯನ್ನೂ ನಿರ್ಮಿಸುತ್ತಿದ್ದಾರೆ. ಬ್ರಹ್ಮ ದೇವರೆಂದು ಪೂಜಿಸಲ್ಪಡುವವನು. ಅವನ ಹೆಸರಿನ ಚಿತ್ರ ಯಾವ ರೀತಿಯದು ಎಂಬ ಗುಟ್ಟು ಸದ್ಯಕ್ಕೆ ರಟ್ಟಾಗಿಲ್ಲ. ಮಕರ ಸಂಕ್ರಾಂತಿಯವರೆಗೆ ಕಾಯಲೇಬೇಕು. ಸಂಕ್ರಾಂತಿಗೆ ಸಿಹಿ ನ್ಯೂಸ್ ಹೇಗೂ ಗೊತ್ತಾಯ್ತಲ್ಲ!

More from Filmibeat

English summary
Hattric Hero Shivarajkumar all-ready finished more than 100 movies. Now, there is talk about which is his 104th Movie? Answer is Brahmasmi. It launches on Makara Sankranthi. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X