»   » ಬೆಳಗಾವಿ ಬೆಡಗಿ ಲಕ್ಷ್ಮಿರೈ ಬಾಲಿವುಡ್‌ಗೆ ಪ್ರವೇಶ

ಬೆಳಗಾವಿ ಬೆಡಗಿ ಲಕ್ಷ್ಮಿರೈ ಬಾಲಿವುಡ್‌ಗೆ ಪ್ರವೇಶ

Subscribe to Filmibeat Kannada

ಬೆಳಗಾವಿ ಬೆಡಗಿ ಲಕ್ಷ್ಮಿ ರೈ ತಮಿಳಿನಲ್ಲಿ ತಮ್ಮ ಸಿನಿ ವೃತ್ತಿ ಜೀವನವನ್ನು ಆರಂಭಿಸುವ ಮೂಲಕ ದಕ್ಷಿಣ ಭಾರತದಲ್ಲಿ ಭದ್ರವಾದ ನೆಲೆ ಕಂಡುಕೊಂಡರು. ದಕ್ಷಿಣದ ಎಲ್ಲ ಭಾಷೆಯ ಚಿತ್ರಗಳಲ್ಲಿ ತಮ್ಮದೇ ಆದ ವರ್ಚಸ್ಸಿನಿಂದ ಸಿನಿ ರಸಿಕರನ್ನು ಆಕರ್ಷಿಸಿರುವ ಲಕ್ಷ್ಮಿರೈ ಈಗ ಬಾಲಿವುಡ್‌ಗೆ ಪ್ರವೆಶಿಸಿದ್ದಾರೆ.

ಅನುನಾಸಿಕ ಗಾಯಕ ಎಂದೇ ಹೆಸರಾಗಿರುವ ಹಿಮೇಶ್ ರೇಶ್ಮಿಯಾಗೆ ಜೋಡಿಯಾಗಿ ಲಕ್ಷ್ಮಿರೈ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು 'ಹಾಯ್ ಗುರೂಜಿ' ಎಂದು. ಅದರಲ್ಲಿ ಆಕೆಯದು ಪಂಜಾಬಿ ಹುಡುಗಿ ಪಾತ್ರ. ಈ ಚಿತ್ರವನ್ನು ಸತೀಶ್ ಕೌಶಿಕ್ ನಿರ್ದೇಶಿಸುತ್ತಿದ್ದಾರೆ. ಸ್ವತಃ ಲಕ್ಷ್ಮಿ ರೈ ಹೇಳುವ ಪ್ರಕಾರ, ಈಗಾಗಲೇ ಎರಡು ಹಾಡುಗಳ ಚಿತ್ರೀಕರಣ ಮುಗಿದಿದೆಯಂತೆ.

ಕನ್ನಡದಲ್ಲಿ ನಟ ದರ್ಶನ್‌ಗೆ ಜೋಡಿಯಾಗಿ 'ಸ್ನೇಹಾನಾ ಪ್ರೀತೀನಾ' ಚಿತ್ರದಲ್ಲಿ, ಮಲೆಯಾಳಂನ ಪ್ರಸಿದ್ಧ ನಟರು ಸೇರಿದಂತೆ ಮೋಹನ್ ಲಾಲ್‌ಗೆ ಜೋಡಿಯಾಗಿ 'ರಾಕ್ ಅಂಡ್ ರೋಲ್' ಹಾಗೂ ಮಮ್ಮುಟ್ಟಿಗೆ ಜೋಡಿಯಾಗಿ 'ಅನ್ನನ್ ತಂಪಿ' ಚಿತ್ರಗಳಲ್ಲಿ ನಟಿಸಿ ದಕ್ಷಿಣದಲ್ಲಿ ಸಾಕಷ್ಟು ಹೆಸರು ಮಿಂಚಿದ್ದರು. ಪ್ರಸ್ತುತ ಈಕೆಯ ಕೈಯಲ್ಲಿ ಮೋಲಿವುಡ್‌ನ ಎರಡು ಭಾರಿ ಬಜೆಟ್‌ನ ಚಿತ್ರಗಳು ಇವೆ. ಹಾಗೆಯೇ ತಮಿಳುನಲ್ಲೂ ಸಾಕಷ್ಟು ಚಿತ್ರಗಳಿಗೆ ಲಕ್ಷ್ಮಿರೈ ಸಹಿ ಹಾಕಿದ್ದಾರೆ. ಇಷ್ಟೆಲ್ಲಾ ಅವಕಾಶಗಳನ್ನು ಕೈಯಲ್ಲಿಟ್ಟುಕೊಂಡು ಬಾಲಿವುಡ್‌ಗೆ ಹೋಗೋ ಉದ್ದೇಶವಾದರೂ ಏನು? ಎಂದು ಕೇಳಿದರೆ; ಇಲ್ಲ ಇಲ್ಲ ನಾನು ಯಾವುದೇ ಕಾರಣಕ್ಕೂ ದಕ್ಷಿಣ ಭಾರತದ ಚಿತ್ರರಂಗವನ್ನು ಬಿಡುವುದಿಲ್ಲ. ನನಗೆ ಇಲ್ಲಿನ ಚಿತ್ರಗಳಲ್ಲಿ ನಟಿಸುವುದೇ ಇಷ್ಟ ಎನ್ನುತ್ತಾರೆ.

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅಂದರೆ ಇದೇ ಏನೋ!?

(ದಟ್ಸ್‌ಕನ್ನಡ ಸಿನಿವಾರ್ತೆ)

ಬೆಳಗಾವಿ ಸುಂದರಿ ಲಕ್ಷ್ಮಿ ರೈ ಚಿತ್ರಪಟ
ಲಕ್ಷ್ನಿರೈ,ಧೋನಿ ನಡುವೆ ಆ ರೀತಿಯ ಸಂಬಂಧ ಇಲ್ಲವಂತೆ!
ವಿಮರ್ಶೆ: ಮಿಂಚಿನ 'ಸಂಚಾರ', ಸೋದರರ ಚೀತ್ಕಾರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada