For Quick Alerts
  ALLOW NOTIFICATIONS  
  For Daily Alerts

  ಮುಂದಿನ ವರ್ಷ ಮಾಲಾಶ್ರೀ ಶಕ್ತಿ ಪ್ರದರ್ಶನ

  |

  ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದ 'ಶಕ್ತಿ' ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ಈಗಲೂ ಮಾಲಾಶ್ರೀ ಚಿತ್ರಗಳಿಗೆ ಬೇಡಿಕೆ ಸಾಕಷ್ಟಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡೊಂದನ್ನು ಹಾಡುವ ಮೂಲಕ ಈ ಚಿತ್ರದ ನಿರೀಕ್ಷೆಯನ್ನು ಇನ್ನೂ ಹೆಚ್ಚು ಹುಟ್ಟುಹಾಕಿದ್ದಾರೆ.

  ಮಾಲಾಶ್ರೀ ದಾರಿಯಲ್ಲಿ ಸ್ಯಾಂಡಲ್ ವುಡ್ ನ ಇನ್ನೂ ಒಂದೆರಡು ನಟ-ನಟಿಯರು ಸಾಗುತ್ತಿದ್ದಾರೆ. ಪ್ರಿಯಾ ಹಾಸನ್ ಮತ್ತು ಆಯೇಷಾ. ಆದರೆ ಅವರ್ಯಾರೂ ಮಾಲಾಶ್ರೀಯಷ್ಟು ಜನಪ್ರಿಯತೆ ಪಡೆದಿಲ್ಲ. ಆದರೂ ಆಕ್ಷನ್ ಚಿತ್ರಗಳತ್ತ ಹೆಚ್ಚು ಗಮನಹರಿಸುತ್ತಿರುವುದೂ ಸುಳ್ಳಲ್ಲ.

  ಬರುವ ವರ್ಷ 2012ರಲ್ಲಿ ಮಾಲಾಶ್ರೀ ಅಭಿನಯದ ಶಕ್ತಿ, ಪ್ರಿಯಾ ಹಾಸನ್ ರ ಲೇಡಿ ಟೈಗರ್, ಹಾಗೂ ಲೇಡಿ ಬ್ರೂಸ್ಲಿ ಆಯೇಷಾ ಬೇಟೆ, ಹೀಗೆ ಸಾಲಾಸಾಲಾಗಿ ಚಿತ್ರಗಳು ತೆರೆಗೆ ಅಪ್ಪಳಿಸಲಿವೆ. ಆಕ್ಷನ್ ಚಿತ್ರಗಳ ಧಮಾಕಾ ನೊಡಲು ನೀವು ಸಿದ್ಧರಾಗಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದ್ದ ಮಾಲಾಶ್ರೀ ಮತ್ತೆ ಶಕ್ತಿ ಪ್ರದರ್ಶನ ಮತ್ತೆ ಆಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Actress Malashri's upcoming movie is Shakti. It releases on 2012. Shivarajkumar sung a sonf for shakti movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X