ತೆಲುಗು ವಾರಿಯರ್ಸ್ ಬೆಂಬಲಕ್ಕೆ ನಿಂತ ರಾಗಿಣಿ

ಭಾನುವಾರ ಬೆಂಗಳೂರಿನಲ್ಲಿ ನಡೆದ ಸಿಸಿಎಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡದ ಜತೆ ಇದ್ದ ರಾಗಿಣಿ, ಕರ್ನಾಟಕದ ತಾರೆಯರ ಬುಲ್ಡೋಜರ್ಸ್ ತಂಡವನ್ನು ಅಪ್ಪಿತಪ್ಪಿಯೂ ಮಾತಾಡಿಸಿಲ್ಲ. ತೆಲುಗು ವಾರಿಯರ್ಸ್, ಕರ್ನಾಟಕ ತಂಡದ ವಿರುದ್ಧ ಆಡಿದ ಪಂದ್ಯ ಅದಲ್ಲದೇ ಇದ್ದರೂ, ಕನ್ನಡದಲ್ಲಿ ಬೆಳೆದ ಒಬ್ಬ ನಟಿಯಾಗಿ ತೆಲುಗು ತಂಡವನ್ನು ಬೆಂಬಲಿಸುವ ಅಗತ್ಯವೇನಿತ್ತು ಅನ್ನೋದು ಎಲ್ಲರ ಪ್ರಶ್ನೆ.
ಸಿಸಿಎಲ್ ಕ್ಯಾಲೆಂಡರಿಗಾಗಿ ನಿಧಿ ಸುಬ್ಬಯ್ಯ ಮತ್ತು ಐಂದ್ರಿತಾ ರೇ ಅರೆಬೆತ್ತಲಾಗಿರುವುದನ್ನು ರಾಗಿಣಿ ಟೀಕಿಸಿದ್ದರು. ನಿಧಿ ಮತ್ತು ಐಂದ್ರಿತಾ ರಾಗಿಣಿಗೆ 'ನಿಮಗ್ಯಾಕೆ ನಮ್ಮ ಉಸಾಬರಿ, ನೀವು ಐಟಂ ಡ್ಯಾನ್ಸ್ ಮಾಡಿಕೊಂಡಿರಿ" ಎಂದು ಟೀಕಿಸಿದ್ದರು. ಈ ವರ್ಷ ರಾಗಿಣಿಯನ್ನು ಸಿಸಿಎಲ್ ತನ್ನ ರಾಯಭಾರಿಯನ್ನಾಗಿ ಮಾಡಿಕೊಂಡಿಲ್ಲ. ಹೀಗಾಗಿ ರಾಗಿಣಿ ಈ ರೀತಿ ಸೇಡು ತೀರಿಸಿಕೊಂಡಿಬಹುದು ಎಂಬುದು ಹಲವರ ಅಭಿಪ್ರಾಯ. ಮುಂದಿನ ಪುಟ ನೋಡಿ....
English summary
Actress Ragini Supported 'Telugu Warriors Team' in CCL, Bangalore. Karnataka Bulldozers team became Angry for this.


Click it and Unblock the Notifications