ಗೋಲ್ಡನ್ ಗರ್ಲ್ ರಮ್ಯಾ ಮತ್ತೊಂದು ಐಟಂ ಡಾನ್ಸ್!?
ಈ ಫೋಟೋ ನೋಡಿದರೆ ಗೋಲ್ಡನ್ ಗರ್ಲ್ ರಮ್ಯಾ ಮತ್ತೊಂದು ಐಟಂ ಡಾನ್ಸ್‌ನಲ್ಲಿ ಕಾಣಿಸಲಿದ್ದಾರೆಯೇ? ಎಂಬ ಅನುಮಾನ ಬರುತ್ತದೆ. ಈಗಾಗಲೆ ಅವರು "ಊರಿಗೊಬ್ಳೆ ಪದ್ಮಾವತಿ..." ಎಂದು 'ಜಾನಿ ಮೇರಾ ನಾಮ್' ಚಿತ್ರದಲ್ಲಿ ಕುಣಿದು ಚಿತ್ರರಸಿಕರ ಹೃದಕ್ಕೆ ಕಿಚ್ಚು ಹಚ್ಚಿದ್ದರು. ಈಗ ಮತ್ತೊಮ್ಮೆ ರಂಜಿಸಲು ಬರುತ್ತಿದ್ದಾರೆ ಲಕ್ಕಿ ಚಿತ್ರದ ಮೂಲಕ.
ರಾಧಿಕಾ ಕುಮಾರಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರದ ನಟ ಯಶ್. ಸದ್ಯಕ್ಕೆ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ. ರಮ್ಯಾ ಅವರ ವಸ್ತ್ರಧಾರಣೆ ನೋಡಿದರೆ ಇದೊಂದು ಹಾಟ್ ಸಾಂಗ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ವತಃ ರಮ್ಯಾ ಅವರು ಈ ಫೋಟೋವನ್ನು ಟ್ವೀಟ್ ಮಾಡಿ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ.
ಅಂದಹಾಗೆ ಈ ಹಾಡಿಗೆ ಸಾಹಿತ್ಯ ಬರೆದಿರುವವರು ಯೋಗರಾಜ್ ಭಟ್. "ನಾನು ಏನು ಮಾಡ್ಲಿ ಸ್ವಾಮಿ ನಾನು ಹುಡುಗಿ ನಾಯಿ ಪ್ರೇಮಿ..." ಎಂಬ ಹಾಡು ಭಟ್ಟರ ಲೇಖನಿಯಿಂದ ಮೂಡಿಬಂದಿದೆ. ಹಾಡು ಚೆನ್ನಾಗಿ ಬಂದಿರುವುದಕ್ಕೆ ರಮ್ಯಾ ಥ್ಯಾಂಕ್ಯು ಭಟ್ರೆ ಎಂದಿದ್ದಾರೆ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











