ರೀಮೇಕ್ ಚಿತ್ರಗಳಲ್ಲಿ ನಟಿಸಲ್ಲಾ ಎಂದ ರಮ್ಯಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಡೆಯಿಂದ ಬಂದ ಬ್ರೇಕಿಂಗ್ ನ್ಯೂಸ್ ಇದು. "ನಾನಿನ್ನು ರೀಮೇಕ್ ಚಿತ್ರಗಳಲ್ಲಿ ನಟಿಸೊಲ್ಲಾ" ಎಂದು ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ರಮ್ಯಾ ಹೇಳಿದ ವಿಷಯ ಈಗ ಸಿನಿಪ್ರೆಕ್ಷಕರಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ಅವರ ಕನ್ನಡ ಪ್ರೀತಿಯನ್ನು ಕನ್ನಡಾಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಬೇರೆ ಭಾಷೆಯಿಂದ ಎರವಲು ಪಡೆದ ಕಥೆಗಳಲ್ಲಿ ನಟಿಸದಿರಲು ರಮ್ಯಾ ನಿರ್ಧರಿಸಿದ್ದರ ಹಿಂದೆ ರಮ್ಯಾರಿಗೆ ಕನ್ನಡದ ಮೇಲಿರುವ ಪ್ರೀತಿ ಕಾರಣವೇ? ಅಥವಾ ಇತ್ತೀಚಿಗೆ ಅವರು ರಾಜಕೀಯದತ್ತ ಒಲವು ತೋರಿಸುತ್ತಿರುವುದು ಕಾರಣವೇ ಎಂಬುದು ಅಪ್ರಸ್ತುತ. ಕಾರಣ ಏನೇ ಆದರೂ ಅವರ ಕನ್ನಡಾಭಿಮಾನ ಮೆಚ್ಚುವಂತಹುದು ಎಂಬುದು ಅಭಿಮಾನಿಗಳ ಮಾತು.
ಈಗೀಗ ರಮ್ಯಾ ಕನ್ನಡದತ್ತ ಅಪಾರ ಒಲವು ತೋರಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಸುಧಾರಣೆಯಾಗಬೇಕು, ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯತೆ ಇರಬೇಕು ಎಂಬುದು ರಮ್ಯಾ ನಿಲುವು. ಈ ಕುರಿತು ವೇದಿಕೆಗಳಲ್ಲಿ ಹೇಳಿಕೆಗಳನ್ನು ನೀಡುತ್ತಿರುವ ರಮ್ಯಾ ಪ್ರಕಾರ, ಕನ್ನಡ ಚಿತ್ರರಂಗದ ಈಗಿನ ಸ್ಥಿತಿಗೆ ಕಾರಣ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿರುವುದು. ಮುಂದಿನ ಪುಟ ನೋಡಿ....


Click it and Unblock the Notifications











