ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ತ್ರಿಷಾ
ಕಡೆಗೂ ದಕ್ಷಿಣದ ಬೆಡಗಿ ತ್ರಿಷಾ ಕೃಷ್ಣನ್ ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಿಎಂ (Not chief minister) ಚಿತ್ರದಲ್ಲಿ ತ್ರಿಷಾ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರಘುರಾಂ.
ಈ ಹಿಂದೆ ರಘುರಾಂ ಅವರು 'ಚೆಲುವೆ ನಿನ್ನೇ ನೋಡಲು' ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಆ ಚಿತ್ರ ಬಾಕ್ಸಾಫೀಸಲ್ಲಿ ತೋಪಾಗಿತ್ತು. ಚಿತ್ರದ ನಿರ್ಮಾಪಕ ಎನ್ ಎಂ ಸುರೇಶ್ ಗಾಂಧಿನಗರದಲ್ಲಿ ಸೈಡಿಗೆ ಸರಿದರು. ಇದೇ ಮೊದಲ ಬಾರಿಗೆ ಕನ್ನಡಕ್ಕೆ ಅಡಿಯಿಡುತ್ತಿರುವ ತ್ರಿಷಾ ಪಡೆದುರುವ ಸಂಭಾವನೆ ಎಷ್ಟು ಗೊತ್ತೆ? ರು.80 ಲಕ್ಷಕ್ಕೆ ಡೀಲ್ ಕುದುರಿಸುವಲ್ಲಿ ಶಂಕರೇಗೌಡ ಯಶಸ್ವಿಯಾಗಿದ್ದಾರೆ.
'ಕೆಂಪೇಗೌಡ' ಹಾಗೂ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಗಳ ನಿರ್ಮಾಪಕ ಶಂಕರೇಗೌಡ ಬತ್ತಳಿಕೆಯಿಂದ ಬರುತ್ತಿರುವ ಮತ್ತೊಂದು ಚಿತ್ರವಿದು. ಸಿಎಂ ಎಂದರೆ ಕಾಮನ್ ಮ್ಯಾನ್. ಶ್ರೀಸಾಮಾನ್ಯನ ಬಗೆಗಿನ ಚಿತ್ರವಿದು. ಚಿತ್ರದಲ್ಲಿ ಯಾವುದೇ ರಾಜಕೀಯ ಅಂಶಗಳಿಲ್ಲ ಎನ್ನುತ್ತಾರೆ ರಘುರಾಂ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











