ಕಿಚ್ಚ ಸುದೀಪನಿಗೆ ಈಗ ಬಟ್ಟೆ ಬಿಚ್ಚಿಸೋ ಹುಚ್ಚು!
ಕನ್ನಡ ಚಿತ್ರರಂಗ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ತನ್ನ ಪಂದ್ಯಾವಳಿಯ ಪ್ರಚಾರಕ್ಕಾಗಿ ಒಂದಷ್ಟು ಕ್ಯಾಲೆಂಡರ್ಸ್ ಮಾಡಿದೆ. ಆ ಕ್ಯಾಲೆಂಡರಿನಲ್ಲಿ ಕನ್ನಡದ ನಟಿಯರಾದ ಐಂದ್ರಿತಾ ರೇ ಹಾಗೂ ನಿಧಿ ಸುಬ್ಬಯ್ಯಗೇಣುದ್ದದ ಎರಡು ತುಂಡು ಬಟ್ಟೆ ಧರಿಸಿಕೊಂಡು ಪೋಸು ನೀಡಿದ್ದಾರೆ. ಅದಕ್ಕಾಗಿ ಅವರು ಪಡೆದಿರುವುದು ಎರಡು ಲಕ್ಷ ರು. ಸಂಭಾವನೆ. ಇವರಿಬ್ಬರೂ ನಟಿಯರಿಗೆ ಟೂ ಫೀಸ್ ಧರಿಸುವಂತೆ ಪ್ರೇರೇಪಿಸಿದ್ದು 'ಬ್ಲಡಿ ಫಕ್ಕರ್ಸ್' ಖ್ಯಾತಿಯ ಹುಚ್ಚ ಸುದೀಪ್.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸಂಸ್ಥೆ ಇಂತಹದೊಂದು ಅಶ್ಲೀಲ ಕ್ಯಾಲೆಂಡರ್ ತರುವ ಯೋಚನೆ ಮಾಡಿದಾಗ ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್ ತಂಡದ ನಾಯಕನಾಗಿರುವ ಸುದೀಪ್ ಸಿಕ್ಕ ಸಿಕ್ಕ ಕನ್ನಡದ ನಟಿಯರನ್ನು ಇಂತಹದೊಂದು ಅಶ್ಲೀಲ ಕ್ಯಾಲೆಂಡರ್ ಗೆ ಟೂ ಫೀಸ್ ಡ್ರೆಸ್ ನಲ್ಲಿ ಪೋಸು ಕೊಡುವಂತೆ ಕೇಳಿಕೊಂಡಿದ್ದಾನೆ. ಆ ಪೈಕಿ ಮೊದಲು ನಟಿ ರಮ್ಯಾರನ್ನು ಆಮಂತ್ರಿಸಿದ್ದಾನೆ. ಆಕೆ ಕ್ಯಾರೇ ಅಂದಿಲ್ಲ.
ನಂತರ ನಟಿ ರಾಗಿಣಿಯ ಬೆನ್ನು ಬಿದ್ದು ಕಾಡಿದ್ದಾನೆ. ಆಕೆಗೆ, ಕ್ರಿಕೆಟ್ಟಿಗೂ ಕ್ಯಾಲೆಂಡರ್ ಗೂ ಮತ್ತು ಬಿಕಿನಿಗೂ ಎತ್ತಣಿಂದೆತ್ತ ಸಂಬಂಧ ಅಂತ ತಿಳಿಯದೇ ಆಕೆ ನೋ ಅಂದಿದ್ದಾಳೆ. ಆನಂತರ ಐಂದ್ರಿತಾ ಹಾಗೂ ನಿಧಿ ಸುಬ್ಬಯ್ಯರಿಗೆ ಗಂಟು ಬಿದ್ದು ಅವರನ್ನು ಗೋವಾದ ಮಾಂಡೋವಿ ನದಿ ತೀರಕ್ಕೆ ಕಳಿಸಿ ಬಿಕಿನಿ ಫೋಟೋ ತೆಗೆಸಿ ಎರಡು ಲಕ್ಷ ಕೈಗಿಡಿಸಿದ್ದಾನೆ ಸುದೀಪ್. ಕನ್ನಡಿಗರ ಮಧ್ಯೆ ಅವರಿಬ್ಬರೂ ಕ್ಯಾಬರೆ ನಟಿ ಅನ್ನಿಸಿಕೊಂಡಿದ್ದಾರೆ. ಇವರಿಗೆ ಬುದ್ಧಿ ಹೇಳುವುದಾದರೂ ಯಾರು? (ಕೃಪೆ: ಹಾಯ್ ಬೆಂಗಳೂರು)


Click it and Unblock the Notifications











