For Quick Alerts
  ALLOW NOTIFICATIONS  
  For Daily Alerts

  ಚಿಂಗಾರಿ ಬಿಡುಗಡೆ ಸನ್ನಿಹಿತ; ಅಭಿಮಾನಿಗಳು ಪುಳಕಿತ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ ಮುಂದಿನ ತಿಂಗಳು ಫೆಬ್ರವರಿ 3, 2012ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ ನೂರಾ ಎಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಇನ್ನೂ ಹೆಚ್ಚು ಚಿತ್ರಮಂದಿರಗಳು ಚಿಂಗಾರಿಯ ಪಾಲಾಗಲಿವೆ ಎಂಬುದು ಸದ್ಯದ ಸುದ್ದಿ.

  ಈಗಾಗಲೇ ಬಿಡುಗಡೆಯಾಗಿರುವ ಉಪೇಂದ್ರ ನಾಯಕತ್ವದ 'ಆರಕ್ಷಕ' ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. 'ವಿಷ್ಣುವರ್ಧನ' 50ಕ್ಕೂ ಹೆಚ್ಚುದಿನ ಮೀರಿ ಪ್ರದರ್ಶನ ಕಾಣುತ್ತಿದೆ. ಕೋ ಕೋ, ಸಿದ್ಲಿಂಗು ಕೂಡ ಚಿತ್ರಮಂದಿರದಿಂದ ಜಾಗ ಖಾಲಿ ಮಾಡಿಲ್ಲ. ಇಷ್ಟಾದರೂ ಚಿಂಗಾರಿಗೆ ಅಷ್ಟೊಂದು ಚಿತ್ರಮಂದಿರಗಳು ಸಿಕ್ಕಿವೆ ಎಂದರೆ ಚಿಂಗಾರಿ 'ಹವಾ' ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

  ಚಿಂಗಾರಿ ನಿರ್ಮಾಪಕರಾದ ಮಹಾದೇವ್ ಮತ್ತು ಮನು ಚಿತ್ರದ ಪ್ರಚಾರ ಕಾರ್ಯವನ್ನು ಅಗತ್ಯಕ್ಕೆ ತಕ್ಕಂತೆ ಚುರುಕುಗೊಳಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತ 'ವಾಲ್ ಪೋಸ್ಟರ್ಸ್' ಹಾಗೂ 'ಹೋರ್ಡಿಂಗ್ಸ್'ಗಳು ಎಲ್ಲರ ಗಮನ ಸೆಳೆಯುತ್ತಿವೆ. ದಿನದಿಂದ ದಿನಕ್ಕೆ ಚಿತ್ರದ ನಿರೀಕ್ಷೆ ಹೆಚ್ಚಾಗುತ್ತಿದೆ. ದರ್ಶನ್ ಅಭಿಮಾನಿಗಳಂತೂ ಚಿಂಗಾರಿ ಭಜನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Challenging Star Darshan movie Chingari Releases on 03, Feb. 2012. Attractive posters welcoming people for Chingari movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X