ಕನ್ನಡ ಶಾಲೆ ಮುಚ್ಚುತ್ತಿರುವ ಬಗ್ಗೆ ಹಂಸಲೇಖ ಬೇಸರ

ಸರಕಾರಿ ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳು ಯಾಕೆ ಬರುತ್ತಿಲ್ಲ ಎಂಬುದನ್ನು ಮೊದಲು ಸರ್ಕಾರ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳನ್ನು ಆಕರ್ಷಿಸುವಂತಹ ಯೋಜನೆಗಳನ್ನು ರೂಪಿಸಬೇಕು. ಅದು ಬಿಟ್ಟು ಏಕಾಏಕಿ ಸರಕಾರಿ ಕನ್ನಡ ಪಾಠಶಾಲೆಗಳನ್ನು ಮುಚ್ಚುವುದು ಸರಿಯಾದ ಕ್ರಮವಲ್ಲ ಎಂದು ಹಂಸಲೇಖ ಕಿವಿಮಾತು ಹೇಳಿದರು.
ಕನ್ನಡ ಭಾಷೆ ಅಭಿವೃದ್ಧಿಯಾಗಬೇಕೆಂದರೆ ಸರಕಾರಿ ಕನ್ನಡ ಪಾಠಶಾಲೆಗಳ ಅವಶ್ಯಕತೆ ಇದ್ದೇ ಇದೆ. ಪ್ರತಿಭೆ ಎಂಬುದು ಒಬ್ಬರ ಸ್ವತ್ತಲ್ಲ, ಅದು ಸಾಧಕರ ಆಸ್ತಿ ಎಂದು ಅವರು ಅಭಿಪ್ರಾಯಪಟ್ಟರು. ಪ್ರತಿಭೆ ಇದ್ದರೆ ಗೌರವ ಮನ್ನಣೆಗಳು ನಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. (ಎಜೆನ್ಸೀಸ್)
English summary
Renowned music director Hamsalekha objects closure of Kannda schools in the state, while addressing in Shimoga. He stated that thousands of students would be deprived of education if these schools were closed.


Click it and Unblock the Notifications