»   » ಕುಲಭೂಷಣ ಖರಬಂದ ಕನ್ನಡಕ್ಕೆ ಮತ್ತೆ ಬಂದ

ಕುಲಭೂಷಣ ಖರಬಂದ ಕನ್ನಡಕ್ಕೆ ಮತ್ತೆ ಬಂದ

Subscribe to Filmibeat Kannada

ಹಿಂದಿ ಚಿತ್ರ ರಂಗದ ಖ್ಯಾತ ನಟ/ಖಳ ನಟ ಕುಲಭೂಷಣ ಖರಬಂದ ಮತ್ತೆ ಕನ್ನಡದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಅವರು 'ತಬ್ಬಲಿಯು ನೀನಾದೆ ಮಗನೆ', (ಹಿಂದಿಯಲ್ಲಿ'ಗೋಧೂಳಿ') ಚಿತ್ರದಲ್ಲಿ ನಟಿಸಿದ್ದರು. ತಬ್ಬಲಿಯು ನೀನಾದೆ ಮಗನೆ ಚಿತ್ರನಾಸಿರುದ್ದೀನ್ ಶಾ ಅವರ ಮೊದಲ ಕನ್ನಡ ಚಿತ್ರವಾಗಿತ್ತು ಕೂಡ.2001ನೇ ಇಸವಿಯಲ್ಲಿ 'ಮಹಾಲಕ್ಷ್ಮಿ' ಚಿತ್ರಕ್ಕಾಗಿ ರಾಜ್ಯ ಸರಕಾರದ ಉತ್ತಮ ಸಂಗೀತ ಪ್ರಶಸ್ತಿ ಪಡೆದಿದ್ದ ಗೋವರ್ಧನ್ ಅವರು ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು.

ಕುಲಭೂಷಣ ಈಗ ನಟಿಸುತ್ತಿರುವ ಚಿತ್ರದ ಹೆಸರು 'ರಸಗುಲ್ಲ'. ಈ ಚಿತ್ರದಲ್ಲಿ ಅವರು ವಿಜ್ಞಾನಿ ಪಾತ್ರದಲ್ಲಿ ನಟಿಸಲ್ಲಿದ್ದು ಈಗಾಗಲೆ 5 ದಿನಗಳ ಷೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ಮನುಷ್ಯನ ಆಯುಸ್ಸನ್ನು ಹೆಚ್ಚಿಸುವ ಒಂದು ಹೊಸ ಗುಳಿಗೆಯನ್ನು ಸಂಶೋಧಿಸಿ ಅದನ್ನ ಹೀರೋ ಮೇಲೆ ಪ್ರಯೋಗಿಸುವ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.ಚಿತ್ರದ ನಾಯಕ ಈ ಗುಳಿಗೆಯನ್ನು ರಸಗುಲ್ಲ ಸವಿದಂತೆ ಸವಿದು ಔಷಧದ ಪ್ರಮಾಣ ಮಿತಿಮೀರುತ್ತದೆ. ಗುಳಿಗೆಯನ್ನು ಕಂಡುಹಿಡಿದ ವಿಜ್ಞಾನಿ ಕಂಗಾಲಾಗುವ ದೃಶ್ಯಗಳನ್ನು 5 ದಿನಗಳ ಕಾಲ ಚಿತ್ರೀಕರಿಸಲಾಯಿತು.

1977ರಲ್ಲಿ ತೆರೆಕಂಡ''ತಬ್ಬಲಿಯು ನೀನಾದೆ ಮಗನೆ'' ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ಚಿತ್ರ. ಇದನ್ನು ಗಿರೀಶ್ ಕಾರ್ನಾಡ್ ಹಾಗೂ ಜಿ.ವಿ.ಅಯ್ಯರ್ ನಿರ್ದೇಶಿಸಿದ್ದರು. ಸಂಗೀತ ಸಿ.ಅಶ್ವಥ್ ಅವರದು. ಈ ಚಿತ್ರದ ನಾಯಕನ ಪಾತ್ರದಲ್ಲಿ ಖರಬಂದ ಅದ್ಭುತವಾಗಿ ನಟಿಸಿದ್ದರು. ಚಿತ್ರದ ಕೊನೆಯಲ್ಲಿ ನಾಯಕ, ನಾಯಕಿ ಮತ್ತವರ ಮಗು ತಬ್ಬಲಿಗಳಾಗುತ್ತಾರೆ.ಖರಬಂದ ಹಿಂದಿಯ ಲಗಾನ್,ಲಗೇರಹೋ ಮುನ್ನಾಭಾಯ್, ಜೋಧಾ ಅಕ್ಬರ್, ವಾಟರ್ ಹಾಗೂ ಗುಪ್ತ್ ನಂತಹ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದರು.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada