For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಗಡ್ಡಾಫಿ : ಉಮ-50

  By * ಜೋಗಿ
  |
  <ul id="pagination-digg"><li class="next"><a href="/tv/31-jogi-write-up-on-udaya-marakini-aid0052.html">Next »</a></li></ul>

  ಸುಮ್ಮನೆ ನೋಡಿದರೆ ಅಪ್ಪಟ ಕಮ್ಯುನಿಸ್ಟ್ ಕಾರ್ಯಕರ್ತನಂತೆ ಕಾಣಿಸುವ ಈ ಗೆಳೆಯ ಪರಮ ಮೌನಿ. ಜಗದ ಗೊಂದಲ ಬೇಡ ಎಂಬಂತೆ ಇರಬಲ್ಲ. ತುಂಬ ತಕರಾರು ಮಾಡಿದರೆ ಎದ್ದು ಹೋಗಿ ಪ್ರತಿಭಟಿಸಬಲ್ಲ. ಅವಡುಗಚ್ಚಿ ಬರೆಯುವುದಕ್ಕೆ ಕೂತರೆ ತಾನು ಕಂಡ ವ್ಯಕ್ತಿಗಳ ಬಗ್ಗೆ, ಸಂಗತಿಗಳ ಬಗ್ಗೆ ಕರಾರುವಾಕ್ಕು ಮತ್ತು ಒಳನೋಟ ಇಟ್ಟುಕೊಂಡ ಬರೆಯಬಲ್ಲ. ಖಾಸಗಿ ದರ್ಬಾರಿನಲ್ಲಿ ಮಾತು ಶುರು ಮಾಡಿದರೆ ಒಂದೊಂದು ಮಾತೂ ಈಟಿ.

  ಅಗಾಧ ನೆನಪಿನ ಶಕ್ತಿ. ಕವಿಗಳ ಬಗ್ಗೆ ಕಡುಕೋಪ, ಸಂಗೀತದ ಬಗ್ಗೆ ಮಡುಗಟ್ಟಿದ ಪ್ರೀತಿ. ಬದುಕೇ ಇಷ್ಟು ಅನ್ನುವ ನಿರ್ಭಾವುಕತೆ. ಇನ್ನಷ್ಟು ತೀವ್ರವಾಗಿ ಬದುಕುವ ಹುಮ್ಮಸ್ಸು. ದೂರದಿಂದ ನೋಡಿದವರು ಈತ ಕಟ್ಟುನಿಟ್ಟು ಮತ್ತು ಶಿಸ್ತಿನ ಅಪಾಯಕಾರಿ ಎಂದು ಭಾವಿಸುವುದುಂಟು. ಆ ಭಾವನೆಯನ್ನು ಹೋಗಲಾಡಿಸುವುದಕ್ಕೆ ಇದುವರೆಗೂ ಯಾವ ಪ್ರಯತ್ನವನ್ನೂ ಮಾಡಿದ್ದನ್ನು ನಾನಂತೂ ನೋಡಿಲ್ಲ. ಗೊತ್ತಿಲ್ಲದ ಫೋನ್ ನಂಬರನ್ನು ಯಾವತ್ತೂ ಎತ್ತದ, ಅಹಂಕಾರಿಗಳನ್ನು, ಕವಿಗಳನ್ನು, ಕುಹಕಿಗಳನ್ನು ಸದಾ ದೂರ ಇಡುವ, ತುಂಬ ಆಪ್ತರನ್ನೂ ಒಳಕೋಣೆಗೆ ಬಿಟ್ಟುಕೊಳ್ಳದ ಈ ಗೆಳೆಯನ ಹೆಸರು ಉದಯ ಮರಕಿಣಿ.

  ನೀವು ಹತ್ತಾರು ವರ್ಷಗಳಿಂದ ಕನ್ನಡಪ್ರಭದ ಓದುಗರಾಗಿದ್ದರೆ ಉದಯ ಮರಕಿಣಿಯ ಹಾಸ್ಯದ ಪಟ್ಟಿಗೆ ಖಂಡಿತ ಸಿಲುಕಿರುತ್ತೀರಿ. ಏಕತಾನತೆ, ಅವವೇ ಮಾತುಗಳ ಚರ್ವಿತ ಚರ್ವಣ, ಓಬೀರಾಯನ ಕಾಲದ ಶೈಲಿಯಿಂದ ಸಿನಿಮಾ ವಿಮರ್ಶೆಯನ್ನು ಆಚೆಗೆಳೆದು ತಂದವರು ಉದಯ್. ಹಾಗೆ ನೋಡಿದರೆ ಸಿನಿಮಾ ಪತ್ರಿಕೋದ್ಯಮದಲ್ಲಿ ಮತ್ತೊಂದು ಅಧ್ಯಾಯವನ್ನು ಆರಂಭಿಸಿದವರು ಅವರೇ. ಅಲ್ಲಿಯ ತನಕ ಕೇವಲ ವರದಿಗಾರಿಕೆ ಮಾತ್ರ ಆಗಿದ್ದ, ಸಿನಿಮಾ ರಿಪೋರ್ಟಿಂಗ್ ಉದಯ್ ಬರಹಗಳಿಂದ ಹೊಸ ಹುಮ್ಮಸ್ಸು ಪಡಕೊಂಡಿತು. ಅನೇಕ ಕಲಾವಿದರು, ನಿರ್ದೇಶಕರು ಮರಕಿಣಿ ತಮ್ಮ ಬಗ್ಗೆ ಬರೆಯಬೇಕು ಎಂದು ಹಂಬಲಿಸುತ್ತಿದ್ದರು.

  <ul id="pagination-digg"><li class="next"><a href="/tv/31-jogi-write-up-on-udaya-marakini-aid0052.html">Next »</a></li></ul>

  English summary
  Noted Kannada journalist, writer Jogi pays rich tributes to the most talented, unbiased Kannada movie reporter Udaya Marakini from Adyanadka, Dakshina District. Uday through his column on movie supplement Chitraprabha/Kannada Prabha has established himself as a role model for young and aspiring KANNADA Journalists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more