ವಿದೇಶಗಳಿಗೆ ಹಾರಲಿದೆ ಪವರ್ ಸ್ಟಾರ್ 'ಜಾಕಿ'
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರ ವಿದೇಶಗಳಿಗೆ ಹಾರಲಿದೆ. ಈಗಾಗಲೇ ವಿದೇಶಗಳಲ್ಲಿ 20 ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಿ ಹೆಸರು ಮಾಡಿರುವ ಬೆವಿನ್ ಎಕ್ಸ್‌ಫೋರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈಗ 'ಜಾಕಿ' ಚಿತ್ರವನ್ನು ಅನಿವಾಸಿ ಕನ್ನಡಿಗರ ಮುಂದೆ ತರಲು ಸಿದ್ಧತೆ ನಡೆಸಿದೆ.
ವಿದೇಶಗಳಲ್ಲಿ ನವೆಂಬರ್ ಮಾಹೆಯಲ್ಲಿ ಜಾಕಿ ಬಿಡುಗಡೆಯಾಗಲಿದೆ. ಆದರೆ ಬಿಡುಗಡೆ ದಿನಾಂಕ ಖಚಿತವಾಗಿಲ್ಲ. ಯುಎಸ್‌ಎ, ದುಬೈ, ಸಿಂಗಪುರ, ಜರ್ಮನಿ, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ವಿವಿಧೆಡೆ 50 ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ವಿದೇಶಿ ವಿತರಣೆ ಹಕ್ಕುಗಳನ್ನು ಪಡೆದಿರುವ ಬೆವಿನ್ ಎಕ್ಸ್ ಫೋರ್ಟ್ ತಿಳಿಸಿದೆ.
ಜಾಕಿ ಚಿತ್ರವಿಮರ್ಶೆ
ಬೆವಿನ್ ಎಕ್ಸ್‌ಫೋರ್ಟ್ಸ್‌ನ ಸುಮಂತ್ ರಾಜ್ ಮಾತನಾಡುತ್ತಾ, 2005ರಲ್ಲಿ ರಫ್ತು ಉದ್ಯಮ ತೀವ್ರ ಬೆಳವಣಿಗೆ ಕಂಡಿತು. ಅಲ್ಲಿಂದ ವಿದೇಶಗಳಿಗೆ ಸಿದ್ಧ ಆಹಾರ, ಸಂಸ್ಕರಿಸಿದ ಆಹಾರವನ್ನು ಸರಬರಾಜು ಮಾಡುತ್ತಿದೆ. ಈಗ ಕನ್ನಡ ಚಲನಚಿತ್ರಗಳನ್ನು ರಫ್ತು ಮಾಡುವ ಹಂತಕ್ಕೆ ತಲುಪಿದ್ದೇವೆ ಎಂದಿದ್ದಾರೆ.
ಚೆನ್ನೈನ 'ಮಾಯಾಜಲ' ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಜಾಕಿ' ಚಿತ್ರ ಮೊದಲ ವಾರದಲ್ಲಿ ಬಾಕ್ಸಾಫೀಸಲ್ಲಿ ಶೇ.75ರಷ್ಟು ಗಳಿಸಿದೆ. ಎರಡನೆ ವಾರದಲ್ಲಿ ಶೇ.60 ಪ್ಲಸ್ ಗಳಿಸಿದೆ. ಹೊರ ರಾಜ್ಯದಲ್ಲಿ ಚಿತ್ರದ ಈ ಬೆಳವಣಿಗೆ ಸಂತಸ ತಂದಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.


Click it and Unblock the Notifications











