ಬಿಎ ಎಲ್‌ಎಲ್‌ಬಿಯಲ್ಲಿ ಮುನ್ನುಗ್ಗಿದ ಮಂಜುನಾಥ
ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ 'ಮಂಜುನಾಥ ಬಿಎ ಎಲ್‌ಎಲ್‌ಬಿ' ಚಿತ್ರಕ್ಕೆ ನಾನ್‌ಸ್ಟಾಪ್ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್ ಕಾಮಿಡಿ ಪ್ರೇಕ್ಷಕರನ್ನು ಚಿತ್ರದಾದ್ಯಂತ ನಕ್ಕು ನಲಿಸುತ್ತದೆ ಎಂದು ನಿರ್ದೇಶಕ ಮದನ್ ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಕರೀಷ್ಮಾ ಕಪೂರ್ ಜೊತೆಯಾಗಿ ಅಭಿನಯಿಸಿದ 'ಬಾಡಿಗಾರ್ಡ್' ಹಿಂದಿ ಚಿತ್ರದ ಆಧಾರವಾಗಿ ಬಂದ ಕನ್ನಡದ 'ಬಾಡಿಗಾರ್ಡ್' ಚಿತ್ರವನ್ನು ಜಗ್ಗೇಶ್ ನಿರ್ಮಿಸಿ, ಅಭಿನಯಿಸಿದ್ದರು. ಆದರೆ ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ.
ಈಗ 'ಮಂಜುನಾಥ ಬಿಎ ಎಲ್‍ಎಲ್‌ಬಿ' ಚಿತ್ರವನ್ನಾದರೂ ಗೆಲ್ಲಿಸಬೇಕು ಎಂಬ ಹಠದಲ್ಲಿ ಜಗ್ಗೇಶ್ ಹಾಗೂ ನಿರ್ದೇಶಕ ಮದನ್ ಶ್ರಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್‌ಗೆ ನಾಯಕಿಯಾಗಿ ನಿಖಿತಾ ತುಕ್ರಲ್ ಅಭಿನಯಿಸುತ್ತಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲೂ ನಿಖಿತಾ ಬಿಜಿಯಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Navarasa Nayaka Jaggesh forth coming movie Manjunatha BA.LLB shooting progressing briskly. This has remake Hindi film Raja and it will be directed by actor/writer Mohan. Nikita Thukral plays lady lead role in the film.


Click it and Unblock the Notifications











