ಗೌರೀ ಗಣೇಶ ಹಬ್ಬಕ್ಕೆ 100% ಕಿಕ್ ಕೊಡೋ ಕಾಮಿಡಿ ಚಿತ್ರ

ಕತೆ ಚಿತ್ರಕಥೆ ಹಾಗೂ ನಿರ್ದೇಶನ ಶಂಕರ್ ಅವರದು. 100 % ಕಿಕ್ ಕೊಡೋ ಕಾಮಿಡಿ ಚಿತ್ರ ಎಂಬ ಭರವಸೆಯನ್ನು ನೀಡಿದ್ದಾರೆ ಚಿತ್ರದ ನಿರ್ದೇಶಕರು. ನೈಂಟಿ ಕುಡಿ ಪಲ್ಟಿ ಹೊಡಿ ಇದು ಚಿತ್ರದ ಅಡಿಬರಹ. ನಿಮಗೆ ನೈಂಟಿ ಕಿಕ್ ನೀಡಲು ತಬಲಾ ನಾಣಿ, ರಂಗಾಯಣ ರಘು, ರಾಜು ತಾಳಿಕೋಟೆ ಬರುತ್ತಿದ್ದಾರೆ.
ಕಡ್ಡಾಯವಾಗಿ ಮಹಿಳೆಯರು ನೋಡಲೇಬೇಕಾದ ಚಿತ್ರ ಇದು ಎನ್ನುತ್ತಾರೆ ಸಾಧು ಕೋಕಿಲ. ಚಿತ್ರದ ಒಂದು ಡೈಲಾಗ್ ಹೀಗಿದೆ...ನಾನ್ ಟೈಟ್ ಆಗಿಲ್ಲ... ಆಗಿಲ್ಲ...ಆಗಿಲ್ಲ...ಶಕ್ಕು ಮೇಲಾಣೆ...! ಹೀಗೆಂದು ಹೇಳೋದು ಬೇರಾರು ಅಲ್ಲ ಸಾಧು ಕೋಕಿಲ. ಆಕ್ಷನ್, ಲವ್ವು, ಸೆಂಟಿಮೆಂಟು ಚಿತ್ರಗಳಿಂದ ಕೊಂಚ ಭಿನ್ನ ಚಿತ್ರ ನಿರೀಕ್ಷಿಸುವವರು ನೈಂಟಿ ಹೊಡೆಯಬಹುದು...ಸಾರಿ ನೋಡಬಹುದು. (ದಟ್ಸ್‌ಕನ್ನಡ ಸಿನಿಮಾ)
More from Filmibeat
English summary
Kannada movie 90 to hit screen all over Karnataka on Gowri Ganesha festival (1st Sep). Sadhu Kokila, Rangayana Raghu, Raju Talikote are in lead. The movie is directed by Shankar.


Click it and Unblock the Notifications











