»   » ರಿಮೇಕ್‌ಗೆ ಚಿತ್ರಕತೆ ಕೊರತೆ ಕಾರಣ: ಜಯಮಾಲಾ

ರಿಮೇಕ್‌ಗೆ ಚಿತ್ರಕತೆ ಕೊರತೆ ಕಾರಣ: ಜಯಮಾಲಾ

Subscribe to Filmibeat Kannada

ಚಿತ್ರಕತೆ ಬರಹಗಾರರಕೊರತೆಯೇ ರಿಮೇಕ್ ಚಿತ್ರ ಹೆಚ್ಚಳಕ್ಕೆ ಕಾರಣ ಎಂದು ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅಭಿಪ್ರಾಯಪಟ್ಟಿದ್ದಾರೆ.

ಅಭಿನಯ ತರಂಗ ನಗರದಲ್ಲಿ ಇತ್ತೀಚೆಗೆ ಆಯೋ ಜಿಸಿದ್ದ ಫ್ರೇಂ- ಸಿನಿಮಾ,ಟಿ.ವಿ.ಅಭಿನಯ ಶಿಬಿರ 'ದಲ್ಲಿ ಮಾತನಾಡುತ್ತಿದ್ದ ಅವರು, ಚಿತ್ರಕತೆ ಬರಹಗಾರರ ಕೊರತೆಯಿಂದ ಕನ್ನಡ ಚಿತ್ರೋದ್ಯಮಕ್ಕೆ ಏಟುಬಿದ್ದಿದೆ. ಈ ಕೊರತೆ ನೀಗಿಸಿದಾಗ,ಉದ್ಯಮ ಬೆಳೆಯಲಿದೆ. ಆದ್ದರಿಂದಚಿತ್ರಕತೆ ಬರಹಗಾರರನ್ನು ಉತ್ತೇಜಿಸ ಬೇಕು ಎಂದು ಹೇಳಿದರು. ಕನ್ನಡದಲ್ಲಿ ಅಭಿನಯದ ಕಲಿಕೆಗೆಹೆಚ್ಚಿನ ಅವಕಾಶ ಇಲ್ಲ. ಆದರೆ, 'ಫ್ರೇಂ' ಆರು ವರ್ಷದಿಂದ ಸ್ವಲ್ಪಮಟ್ಟಿಗೆ ಈಕೊರತೆಯನ್ನು ನೀಗಿಸುತ್ತಿದೆ.

ವಾರ್ತಾ ಇಲಾಖೆಯ ನಿರ್ದೇಶಕವಿಶುಕುಮಾರ್ ಮಾತನಾಡಿ,ಯಾವುದೇ ಕ್ಷೇತ್ರದಲ್ಲಿ ಖ್ಯಾತಿ, ಜನಪ್ರಿಯತೆ ಸುಲಭವಾಗಿ ಸಿಗುವುದಿಲ್ಲ.ಛಲ, ಗುರಿ, ಪರಿಶ್ರಮದಿಂದಷ್ಟೇಯಶಸ್ಸು ಸಾಧ್ಯ ಎಂದರು.ಶಿಬಿರದ ನಿರ್ದೇಶಕ, ಪತ್ರಕರ್ತಪ್ರಕಾಶ್ ಬೆಳವಾಡಿ ಮಾತನಾಡಿ, ದೇಶ ದಲ್ಲಿ ಪ್ರತಿ ವರ್ಷ 800 ರಿಂದ ಒಂದು ಸಾವಿರ ವಾಣಿಜ್ಯ ಚಿತ್ರಗಳು ನಿರ್ಮಾಣ ಗೊಳ್ಳುತ್ತಿವೆ.ಆದರೆ, ಇವುಗಳಲ್ಲಿ ಶೇ.1 ರಷ್ಟೂತರಬೇತಿ ಪಡೆದ ಕಲಾವಿದರು ಇರುವುದಿಲ್ಲ.ಚಿತ್ರರಂಗ ಮತ್ತು ಟಿ.ವಿ. ಕ್ಷೇತ್ರದಿನೇದಿನೆ ಬೆಳೆಯುತ್ತಿದೆ. ಇದರಲ್ಲಿಅಭಿನಯಿಸುವವರಿಗೆ ತರಬೇತಿ ಇರದೆಇದ್ದರೆ ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲೂ ಫಿಲಂ ಕೋರ್ಸ್ ಇಲ್ಲ. ಸರಕಾರಇದನ್ನು ಗಂಭೀರವಾಗಿ ಪರಿಗಣಿಸಿ,ಕೋರ್ಸ್ ಆರಂಭಿಸಲು ಮುಂದಾ ಗಬೇಕು ಎಂದು ಮನವಿ ಮಾಡಿದರು.ಶಿಬಿರ ಉದ್ಘಾಟಸಿದ ಚಿತ್ರ ನಟಗಣೇಶ್ ಮಾತನಾಡಿ, ಅಭಿನಯ ತರಬೇತಿ ಪಡೆಯುವವರು ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಕಠಿಣ ಪರಿ ಶ್ರಮದಿಂದಷ್ಟೇ ಯಶಸ್ಸು ಸಾಧ್ಯ ಎಂದರು.ಚಿತ್ರನಟರಾದ ವಿಜಯ್, ಅಜಯ್ ಮಾತನಾಡಿದರು. ಚಿತ್ರ ನಿರ್ಮಾಪಕಶ್ರೀನಿವಾಸ್, ಫ್ರೇಂ ಸಂಚಾಲಕಿ ಗೌರಿದತ್ತು, ನಟ ಗಣೇಶ್ ,ಕಾರ್ಯದರ್ಶಿ ಎ.ಎಸ್.ಮೂರ್ತಿಉಪಸ್ಥಿತರಿದ್ದರು.

(ಸ್ನೇಹಸೇತು:ವಿಜಯ ಕರ್ನಾಟಕ)

ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿಗೆ ವಿರೋಧ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada