ಶ್ರೀರಾಘವೇಂದ್ರ ಸ್ವಾಮಿ ದರ್ಶನ ಭಾಗ್ಯ ಪಡೆದ ಪ್ರೇಮ್
ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಗುರುವಾರ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರಸ್ವಾಮಿ ಬೃಂದಾವನ ದರ್ಶನ ಪಡೆದರು ಭಾಗ್ಯ ಪಡೆದರು. ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ವಿಷ್ಣುತೀರ್ಥ ಅವರು ಪ್ರೇಮ್ ಅವರಿಗೆ ಸ್ವಾಗತಿಸಿ ಭರಮಾಡಿಕೊಂಡರು.
ಮೊದಲು ಗ್ರಾಮದೇವತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಠಾಧೀಶರು ಸ್ವಾಮಿಜಿಗಳ ಶೇಷವಸ್ತ್ರದೊಂದಿಗೆ ಸತ್ಕರಿಸಿ, ಫಲಮಂತ್ರಾಕ್ಷತೆ, ತೀರ್ಥ ಪ್ರಸಾದಗಳನ್ನು ನೀಡಿ ಆಶೀರ್ವದಿಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪ್ರೇಮ್, ಇದುವರೆಗೂ ಒಟ್ಟು 15 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇವುಗಳಲ್ಲಿ ನೆನಪಿರಲಿ, ಜೊತೆಜೊತೆಯಲಿ, ಪಲ್ಲಕ್ಕಿ, ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರಗಳು ಬೆಳ್ಳಿಹಬ್ಬ ಆಚರಿಸಿಕೊಂಡಿದ್ದು ತಮಗೆ ತೃಪ್ತಿ ನೀಡಿದೆ ಎಂದರು. ತಮ್ಮ ಅಭಿನಯದ ಹೊಚ್ಚ ಹೊಸ 'ಶತ್ರು' ಚಿತ್ರದಲ್ಲಿ ತಮ್ಮದು ಎಸಿಪಿ ಪಾತ್ರ. ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿರುವುದಾಗಿ ತಿಳಿಸಿದರು. (ಏಜೆನ್ಸೀಸ್)


Click it and Unblock the Notifications











