ದಿನೇಶ್ ಬಾಬು ಮತ್ತೊಂದು ಮದುವೆಗೆ ರೆಡಿಯಾದ್ರು
ಅಯ್ಯೋ ಮೊನ್ನೆ ತಾನೆ 'ಎರಡನೆ ಮದುವೆ'ಯಾದರಲ್ಲಪ್ಪ ದಿನೇಶ್ ಬಾಬು. ಅದೇನು ಕೇಡುಗಾಲ ಬಂದಪ್ಪ ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾರೆ! ಎಂಬುದೇ ನಿಮ್ಮ ಗುಮಾನಿಯಾದರೆ ತಪ್ಪಾಗುತ್ತದೆ. ಅವರು ಈಗ ಆಕ್ಷನ್, ಕಟ್ ಹೇಳಲು ಹೊರಟಿರುವುದು 'ಮತ್ತೊಂದು ಮದುವೇನಾ...' ಚಿತ್ರಕ್ಕೆ.
ಎರಡನೆ ಮದುವೆ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದೆ ತಡ ದಿನೇಶ್ ಬಾಬು ಮದುವೆ ಸಬ್ಜೆಕ್ಟಿನಿಂದ ಇನ್ನೂ ಹೊರಗೆ ಬಂದಂತಿಲ್ಲ. ಅಂದಹಾಗೆ ಈ ಮದುವೆಯಲ್ಲಿ ಸುಹಾಸಿನಿ ಮತ್ತು ಜೆನ್ನಿಫರ್ ಕೊತ್ವಾಲ್ ಭಾಗಿಯಾಗಲಿದ್ದಾರೆ. ಎರಡನೆ ಮದುವೆಯ ಬಹುತೇಕ ತಾರಾಗಣ ಚಿತ್ರದಲ್ಲಿರುತ್ತದೆ.
ಸುಹಾಸಿನಿ, ಅನಂತನಾಗ್, ತಾರಾ, ಜೆನ್ನಿಫರ್ ಕೊತ್ವಾಲ್, ಶರಣ್, ಎಂ ಎಸ್ ಉಮೇಶ್ ಮತ್ತೆ ಮದುವೇನಾ...ಚಿತ್ರದ ಪ್ರಮುಖ ಮುಖಗಳು. ಸೆಪ್ಟೆಂಬರ್ 15ರಿಂದ ಚಿತ್ರೀಕರಣ ಆರಂಭ. ಉಮೇಶ್ ಬಣಕಾರ್ ಮತ್ತು ಅನಿಲ್ ಪಿ ಮೆಣಸಿನಕಾಯಿ ನಿರ್ಮಿಸುತ್ತಿರುವ ಚಿತ್ರ. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
More from Filmibeat
ಎರಡನೆ ಮದುವೆ ಜೆನ್ನಿಫರ್ ಕೊತ್ವಾಲ್ ಸುಹಾಸಿನಿ ದಿನೇಶ್ ಬಾಬು ಅನಂತನಾಗ್ ಮತ್ತೊಂದು ಮದುವೇನಾ eradane maduve mattondu maduvena anant nag dinesh babu jennifer kotwal suhasini maniratnam


Click it and Unblock the Notifications











