»   » ಸೈಕೋ ಚಿತ್ರದ ನಾಯಕ, ನಾಯಕಿ ಬಹಿರಂಗ!

ಸೈಕೋ ಚಿತ್ರದ ನಾಯಕ, ನಾಯಕಿ ಬಹಿರಂಗ!

Posted By:
Subscribe to Filmibeat Kannada

ಸೈಕೋ ಚಿತ್ರದ ನಾಯಕ,ನಾಯಕಿ ಯಾರೆಂದು ಪ್ರೇಕ್ಷಕ ವಲಯದಲ್ಲಿ ಮೂಡಿದ್ದ ಸಾಕಷ್ಟು ಕುತೂಹಲಕ್ಕೆ ಇಂದು ತೆರೆಬಿತ್ತು. ಮೈಸೂರು ಮೂಲದ ಹೊಸ ಮುಖಗಳಾದ ಧನುಷ್ ಮತ್ತು ಅನಿತಾ ಸೈಕೋ ಚಿತ್ರದ ಪ್ರಧಾನ ಪಾತ್ರಧಾರಿಗಳು ಎಂದು ಶುಕ್ರವಾರದ ಮೊದಲ ಪ್ರದರ್ಶನದಲ್ಲಿರುವ ದಟ್ಸ್ ಕನ್ನಡ ವರದಿಗಾರರು ತಿಳಿಸಿದರು. ಚಿತ್ರ ಬಿಡುಗಡೆಯವರೆಗೂ ನಾಯಕ, ನಾಯಕಿಯರ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ನಾಯಕ, ನಾಯಕಿ ಮೈಸೂರು ಕಡೆಯವರು ಎಂಬ ಸುದ್ದಿ ಹಬ್ಬಿತ್ತು. ನಾಯಕಿ ಅನಿತಾ ಮೂಲ ಊರು ದಕ್ಷಿಣ ಕನ್ನಡದ ಬೈಂದೂರು. ತಂದೆ ಇರುವುದು ಶಿರ್ಸಿ ಬಳಿಯ ಮುಂಡಗೋಡಿನಲ್ಲಿ. ಮಗಳು ಚಿತ್ರರಂಗದಲ್ಲಿ ನಟಿಸಬೇಕೆಂಬ ಕನಸು ಹೊತ್ತು ಬಂದಿರುವುದು ಬೆಂಗಳೂರಿಗೆ.

ಸೈಕೋ ನಿರ್ದೇಶಕ ದೇವದತ್ತ, ನಿರ್ಮಾಪಕ ಗುರುದತ್ತ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಚಿತ್ರತಂಡದ ಇತರರು ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ ಇಂದು ಸಿನಿಮಾ ವೀಕ್ಷಿಸಿದರು. ಚಿತ್ರಕ್ಕೆ ಸುಮಾರು 1.25 ಕೋಟಿ ವೆಚ್ಚ ಮಾಡಲಾಗಿದ್ದು ವಿತರಣೆ ಹಕ್ಕನ್ನು 2.4 ಕೋಟಿಗೆ ಮಾರಾಟವಾಗಿರುವ ಸುದ್ದಿ ಗಾಂಧಿನಗರದಲ್ಲಿ ದಟ್ಟವಾಗಿ ಹಬ್ಬಿದೆ. ಹೀಗಾಗಿ ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕರು ಸೇಫ್ ಆಗಿದ್ದಾರೆ.

ಅಬಾಲ ವೃದ್ಧರಾಗಿ ಕಾಡುತ್ತ್ತಿರುವ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಚಿತ್ರ ಪ್ರಾರಂಭವಾದ 40 ನಿಮಿಷಕ್ಕೆ ಪ್ರಾರಂಭವಾಗಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿತು ಎಂದು ನಮ್ಮ ವರದಿಗಾರರು ತಿಳಿಸಿದರು. ಇಂದಿನಿಂದ ನಿನ್ನ ಪೂಜೆಗೆ ಬಂದೆ ಮಾದೇಶ್ವರಾ... ಮೇನಕ(4 ಆಟ), ಪ್ರಮೋದ್(ಬೆ.ಆಟ), ಉಮಾ(ಬೆ. ಆಟ), ನವರಂಗ್(2 ಆಟ), ಸಿದ್ದೇಶ್ವರ (4 ಆಟ), ರೇಣುಕಾ ಪ್ರಸನ್ನ(4 ಆಟ), ತುಳಸಿ (4 ಆಟ), ತಿರುಮಲ(4 ಆಟ), ಪಿವಿಆರ್, ಲಿಡೋ ಫೇಮ್, ವೀರಭದ್ರೇಶ್ವರ (4 ಆಟ) .. ಹಾಗೂ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸವಿಸ್ತಾರವಾದ ಸೈಕೋ ಚಿತ್ರದ ವಿಮರ್ಶೆ ಇಂದು ಸಂಜೆ ಒಳಗೆ(ಅ.31) ದಟ್ಸ್ ಕನ್ನಡದಲ್ಲಿ ಪ್ರಕಟವಾಗಲಿದೆ, ನಿರೀಕ್ಷಿಸಿ!

(ದಟ್ಸ್ ಕನ್ನಡ ವಾರ್ತೆ)

ವಿಮರ್ಶೆ : ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ
ಸೈಕೋ;ಮುಹೂರ್ತದಿಂದ ಬೆಳ್ಳಿತೆರೆವರೆಗಿನ ನೋಟ
'ಯೂ ಟೂಬ್' ಮಾಯಾತಾಣದಲ್ಲಿ ಕನ್ನಡ ಝಲಕ್!
ಸದಾಶಿವ ಬ್ರಹ್ಮಾವರ ಅವರಿಗೆ ನೆಲೆ ನೀಡಿದ ಸೈಕೊ
ಸೈಕೋ ಚಿತ್ರದ ಗುಂಗುಡುವ ಹಾಡುಗಳ ಮಾಯಗಾರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada