»   » ಇನ್ಮುಂದೆ ರೀಮೇಕ್ ಮಾಡೊಲ್ಲಾ ಎಂದ ಶಂಕರ್

ಇನ್ಮುಂದೆ ರೀಮೇಕ್ ಮಾಡೊಲ್ಲಾ ಎಂದ ಶಂಕರ್

Posted By:
Subscribe to Filmibeat Kannada

ಎರಡು ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಸ್ವಮೇಕ್ ಚಿತ್ರನಿರ್ದೇಶಕನಾಗಿ ಮೆರೆದ ಶಂಕರ್, ಇದೀಗ ನಂಬನ್ ಎಂಬ ರೀಮೇಕ್ ಚಿತ್ರವನ್ನು ಮಾಡಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಈ ಚಿತ್ರ ಅಮೀರ್ ಖಾನ್ ನಾಯಕತ್ವದ 'ತ್ರೀ ಈಡಿಯಟ್ಸ್' ಹಿಂದಿಯ ರೀಮೇಕ್ ಆಗಿದ್ದು, ಇದನ್ನು ತೆಲುಗಿನಲ್ಲಿ ಶಂಕರ್ ಅಚ್ಚುಕಟ್ಟಾಗಿಯೇ ಮಾಡಿದ್ದಾರೆ. ಆದರೆ ಪ್ರೇಕ್ಷಕರು ಶಂಕರ್ ರೀಮೇಕ್ ಮಾಡಿದ್ದನ್ನು ಇಷ್ಟಪಡುತ್ತಿಲ್ಲ.

ಇದು ತಿಳಿಯುತ್ತಲೇ ಶಂಕರ್ "ಇನ್ನು ಮುಂದೆ ನಾನು ಯಾವತ್ತೂ ರೀಮೇಕ್ ಮಾಡುವುದಿಲ್ಲ" ಎಂದಿದ್ದಾರೆ. ಬರೋಬ್ಬರೀ ಎರಡು ದಶಕಗಳ ಕಾಲ ಕೇವಲ ಸ್ವಮೇಕ್ ಮಾಡಿ ಗೆದ್ದಿರುವ ನಿರ್ದೇಶಕ ಶಂಕರ್ ಗೆ ರೀಮೇಕ್ ಮಾಡುವ ಅಗತ್ಯ ಖಂಡಿತ ಇರಲಿಲ್ಲ. ಇದೊಂದು ಯಶಸ್ವೀ ಪ್ರಯೋಗ ಅಷ್ಟೇ. ಆದರೆ ಸ್ವತಃ ಶಂಕರ್, ಇದರ ವಿರುದ್ಧ ನಡೆ ಅನುಸರಿಸಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿಯ 150ನೇ ಚಿತ್ರ ಮಾಡುತ್ತಾರೆಂಬ ಗಾಳಿಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಂಕರ್, "ನಾನು ಈ ಕುರಿತು ಎಲ್ಲೂ ಹೇಳಿಲ್ಲ, ಅದು ಕೇವಲ ಊಹಾಪೋಹ" ಎಂದಿದ್ದಾರೆ. ಸದ್ಯದಲ್ಲಿ ತಾವು ರಜೆಯಲ್ಲಿದ್ದು ನಂತರ ಮುಂದಿನ ಪ್ರಾಜೆಕ್ಟ್ ಬಗ್ಗೆ ನಂತರ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್)

English summary
He is probably one director, who choose to direct a remake film even after tasting 100 percent success in original films. If you have guessed it as Shankar, then you are absolutely right.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada