ವಿದೇಶದಲ್ಲಿ ಚಾಲೆಂಜಿಂಗ್ ಸ್ಟಾರ್ 'ಪ್ರಿನ್ಸ್' ತಕಧಿಮಿತಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಪ್ರಿನ್ಸ್' ಚಿತ್ರದ ಹಾಡುಗಳ ಚಿತ್ರೀಕರಣ ಡಿಸಂಬರ್ 15 ರಿಂದ ಆರಂಭವಾಗಲಿದೆ. ಐದು ಹಾಡುಗಳ ಪೈಕಿ ಎರಡು ಹಾಡುಗಳು ವಿದೇಶದಲ್ಲಿ ಚಿತ್ರೀಕರಣಗೊಂಡರೆ, ಮೂರು ಹಾಡುಗಳ ಚಿತ್ರೀಕರಣ ಕರ್ನಾಟಕದಲ್ಲೇ ನಡೆಯಲಿದೆ ಎಂದು ನಿರ್ದೇಶಕ ಓಂಪ್ರಕಾಶ್‌ರಾವ್ ತಿಳಿಸಿದ್ದಾರೆ.
ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ನಡೆದಿದೆ. ಎಂ.ಎಸ್.ರಮೇಶ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ವೀನಸ್‌ಮೂರ್ತಿ ಛಾಯಾಗ್ರಹಣ, ಲಕ್ಷ್ಮಣ್‌ರೆಡ್ಡಿ ಸಂಕಲನ, ಪಳನಿರಾಜ್ ಮತ್ತು ರವಿವರ್ಮ ಸಾಹಸ ನಿರ್ದೆಶನವಿರುದೆ.
'ಪ್ರಿನ್ಸ್' ಚಿತ್ರದ ತಾರಾಬಳಗದಲ್ಲಿ ದರ್ಶನ್, ಜನ್ನಿಫರ್, ನಿಖಿತ, ಅವಿನಾಶ್, ಶೊಭರಾಜ್, ಆದಿಲೋಕೇಶ್, ಅವಿನಾಶ್, ಸಿಹಿಕಹಿಚಂದ್ರು, ರಂಗಾಯಣರಘು, ಶೇಖರ್‌ಕೋಟ್ಯಾನ್ ಮುಂತಾದವರಿದ್ದಾರೆ. ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್‌ನಾಗರಾಜ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.
ಪ್ರಿನ್ಸ್ ದರ್ಶನ್ ನಿಖಿತಾ ಜೆನ್ನಿಫರ್ ಕೊತ್ವಾಲ್ ಓಂ ಪ್ರಕಾಶ್ ರಾವ್ ಮೈಸೂರು ಸಂದೇಶ್ ನಾಗರಾಜ್ prince dcarshan nikita thukral marriage jennifer kotwal om prakash rao v harikrishna sandesh nagaraj


Click it and Unblock the Notifications