For Quick Alerts
  ALLOW NOTIFICATIONS  
  For Daily Alerts

  'ರಾಘವೇಂದ್ರ ಮಹಿಮೆ'ಯಲ್ಲಿ ಶ್ರೀರಾಮ ಪದ

  By Rajendra
  |

  ಗುರು ಶ್ರೀರಾಘವೇಂದ್ರರ ಮಹಿಮೆಗಳನ್ನು ಸಾರುವ 'ರಾಘವೇಂದ್ರ ಮಹಿಮೆ' ಚಿತ್ರಕ್ಕಾಗಿ ಸೂರ್ಯ ಅವರು ಬರೆದಿರುವ "ಶರಣು ಶರಣು ಶರಣು ಶ್ರೀರಾಮ ಬೇಡಿದೆ ನಿನ್ನ ಬಾ ರಘುರಾಮ..." ಎಂಬ ಗೀತೆಯ ಚಿತ್ರೀಕರಣ ಪುಟ್ಟಣ್ಣ ಸ್ಟುಡಿಯೋದಲ್ಲಿ ನಡೆದಿದೆ. ರವೀಂದ್ರ ಗೋಪಾಲ್ ಹಾಗೂ ಅಶ್ವಿನಿ ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಶಿವಸುಬ್ರಹ್ಮಣ್ಯ ನೃತ್ಯ ನಿರ್ದೇಶನ ಮಾಡಿದರು.

  ಎರಡು ಗೀತೆಗಳ ಚಿತ್ರೀಕರಣ ಬಾಕಿಯಿದ್ದು, ಒಂದು ಗೀತೆಯ ಚಿತ್ರೀಕರಣ ಮಂತ್ರಾಲಯದಲ್ಲಿ ನಡೆದರೆ ಮತ್ತೊಂದರ ಚಿತ್ರೀಕರಣ ಉಡುಪಿ, ತಂಜಾವುರು, ಕುಂಭಕೋಣ ಮುಂತಾದ ಕಡೆ ನಡೆಯಲಿದೆ. ತೆಲುಗು ಹಾಗೂ ತಮಿಳಿನಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣಚಂದ್ರ ಈ ಚಿತ್ರದ ನಿರ್ದೇಶಕರು.

  ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ರವೀಂದ್ರ ಗೋಪಾಲ ಈ ಚಿತ್ರದ ನಾಯಕರೂ ಹೌದು. ವಿನೋದ್ ಆಳ್ವಾ, ಸತ್ಯಪ್ರಕಾಶ್, ಶ್ರೀಧರ್, ರೇಖಾ, ಧರ್ಮ, ಅಶ್ವಿನಿ ಮುಂತಾದವರ ಅಭಿನಯದ ಈ ಚಿತ್ರಕ್ಕೆ ಎಲ್.ಎನ್.ಸೂರ್ಯ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್‌ಕುಮಾರ್ ಸಂಗೀತ ನೀಡಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  The song shooting of Raghavendra Mahime brisk progress, a film focusing on the life of Swami Raghavendra has begun its shooting in full swing. Swami Raghavendra's ardent devotee Ravindra Gopal has produced the film and Krishna Chandra is the director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X